ಹಮಾಸ್ ನಾಯಕ ನಾಪತ್ತೆ.? ಪ್ರಮುಖರನ್ನು ಪತ್ತೆಹಚ್ಚಲು ಇಸ್ರೇಲ್ ವಿಫಲ - Mahanayaka

ಹಮಾಸ್ ನಾಯಕ ನಾಪತ್ತೆ.? ಪ್ರಮುಖರನ್ನು ಪತ್ತೆಹಚ್ಚಲು ಇಸ್ರೇಲ್ ವಿಫಲ

04/07/2024

ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರು ಎಲ್ಲಿದ್ದಾರೆ ಎಂಬುದು ಎರಡು ಅಥವಾ ಮೂರು ಮಂದಿಯ ಹೊರತು ಇನ್ನಾರಿಗೂ ಗೊತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಲಂಡನ್ ಮೂಲದ ಪತ್ರಿಕೆಯು ಹಮಾಸ್ ಮಾಹಿತಿಯನ್ನು ಆಧರಿಸಿ ಈ ವರದಿ ಮಾಡಿದೆ.


Provided by

ಎರಡು ಅಥವಾ ಮೂರು ಮಂದಿಗೆ ಮಾತ್ರ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿದೆ. ಅವರೇ ಅವರ ಜೊತೆಗೆ ಸಂಪರ್ಕದಲ್ಲಿದ್ದಾರೆ. ಅವರ ಅಭಿಪ್ರಾಯ ಮತ್ತು ವಿದೇಶದಲ್ಲಿರುವ ಹಮಾಸ್ ನಾಯಕರ ನಡುವಿನ ಅಭಿಪ್ರಾಯಗಳನ್ನು ಅವರು ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ. ಹಮಾಸ್ ನ ರಾಜಕೀಯ ಮತ್ತು ಸೇನಾ ಮುಖ್ಯಸ್ಥರಲ್ಲಿ ಪ್ರಮುಖರನ್ನು ಪತ್ತೆಹಚ್ಚಲು ಇಸ್ರೇಲ್ ಈಗಲೂ ವಿಫಲವಾಗಿದೆ. ಇವರಲ್ಲಿ ಕೆಲವರ ಮೇಲೆ ದಾಳಿ ನಡೆಸಲಾಗಿದೆ, ಕೆಲವರಿಗೆ ಗಾಯಗಳಾಗಿವೆ ಮತ್ತು ಕೆಲವರು ಸುರಕ್ಷಿತವಾಗಿದ್ದಾರೆ ಎಂಬ ವರದಿಯೂ ಇದೆ. ಆದರೆ ಇವರಲ್ಲಿ ಸಿನ್ವಾರ್ ಇಲ್ಲ ಎಂದು ವರದಿ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ