ರಿಲೀಸ್: ಮೂವರು ಇಸ್ರೇಲಿ ನಾಗರಿಕರನ್ನು ಬಿಡುಗಡೆಗೊಳಿಸಿದ ಹಮಾಸ್

ಓರ್ವ ಅಮೆರಿಕನ್ ನಾಗರಿಕನೂ ಸೇರಿದಂತೆ ಮೂವರು ಇಸ್ರೇಲಿ ನಾಗರಿಕರನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ 369 ಫೆಲಸ್ತೀನಿ ಕೈದಿಗಳನ್ನು ಬಿಡುಗಡೆಗೊಳಿಸಬೇಕಾಗಿದೆ.
ಈ ಒತ್ತೆಯಾಳುಗಳನ್ನು ಖಾನ್ ಯೂನಿಸ್ ನಲ್ಲಿ ರೆಡ್ ಕ್ರಾಸ್ ಸಿಬ್ಬಂದಿಗಳ ವಶಕ್ಕೆ ಒಪ್ಪಿಸಲಾಯಿತು. ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಆಕ್ರಮಣ ನಡೆಸುತ್ತಿರುವುದರಿಂದ ತಾನು ಒತ್ತಯಾಳುಗಳನ್ನು ಬಿಡುಗಡೆಗೊಳಿಸಲ್ಲ ಎಂದು ಹಮಾಸ್ ಈ ಮೊದಲು ಹೇಳಿತ್ತು. ಇದೇ ವೇಳೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಯುದ್ಧ ಪ್ರಾರಂಭಿಸುವುದಾಗಿ ನೆತನ್ಯಾಹು ಬೆದರಿಕೆ ಹಾಕಿದ್ದರು. ಫೆಬ್ರವರಿ 15ರಂದು ಎಲ್ಲಾ ಒತ್ತೆಯಾಗಳನ್ನು ಬಿಡುಗಡೆಗೊಳಿಸದಿದ್ದರೆ ಹಮಾಸ್ ಗೆ ನರಕದ ಬಾಗಿಲು ತೋರಿಸುವುದಾಗಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು.
ಈವರೆಗೆ ಒಟ್ಟು 21 ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿದ್ದು ಇದಕ್ಕೆ ಪ್ರತಿಯಾಗಿ 730 ಫೆಲಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj