ಹಮಾಸ್ ಗೆ ನೂತನ ಮುಖ್ಯಸ್ಥ: ಫೆಲೆಸ್ತೀನ್ ನ ಕಮ್ಯುನಿಸ್ಟ್ ಪಕ್ಷಗಳಿಂದ ಸ್ವಾಗತ
ಹಮಾಸ್ ಮುಖ್ಯಸ್ಥರಾಗಿ ಯಹ್ಯ ಸಿನ್ವಾರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಫೆಲೆಸ್ತೀನ್ ನ ಕಮ್ಯುನಿಸ್ಟ್ ಪಕ್ಷಗಳು ಸ್ವಾಗತಿಸಿವೆ. ಡೆಮಾಕ್ರೆಟಿಕ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲಸ್ತೀನ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಶನ್ ಆಫ್ ಫೆಲೆಸ್ತೀನ್ ಎಂಬ ಪಕ್ಷಗಳು ಸಿನ್ವಾರ್ ಆಯ್ಕೆಯನ್ನು ಸ್ವಾಗತಿಸಿ ಬಹಿರಂಗ ಹೇಳಿಕೆ ನೀಡಿವೆ.
ಹನಿಯ ಹತ್ಯೆಯಿಂದ ತೆರವಾಗಿರುವ ಸ್ಥಾನಕ್ಕೆ ಸಿನ್ವಾರ್ ಅವರ ಆಯ್ಕೆ ಸೂಕ್ತವಾಗಿದೆ ಮತ್ತು ಅವರು ಹಮಾಸ್ ಗೆ ಅತ್ಯುತ್ತಮ ನೇತೃತ್ವ ನೀಡಲಿದ್ದಾರೆ ಎಂದು ಡೆಮಾಕ್ರೆಟಿಕ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲಸ್ತೀನ್ ಪಕ್ಷವು ಹೇಳಿದೆ. ಸಿನ್ವಾರ್ ಅವರ ಆಯ್ಕೆಯು ಫೆಲೆಸ್ತೀನ್ ವಿಮೋಚನಾ ಹೋರಾಟಕ್ಕೆ ದೊಡ್ಡದೊಂದು ಕೊಡುಗೆ ನೀಡಲಿದೆ. ಫೆಲೆಸ್ತೀನಿಗಾಗಿ ಹುತಾತ್ಮರಾದವರ ರಕ್ತಕ್ಕೆ ಇವರಿಂದ ನ್ಯಾಯ ಸಲ್ಲಿಕೆಯಾಗಲಿದೆ ಎಂದು ಕೂಡ ಪಕ್ಷ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth