ಹಂಸಲೇಖ ವಿರುದ್ಧ ದೂರು ನೀಡಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲು - Mahanayaka
12:37 PM Tuesday 17 - September 2024

ಹಂಸಲೇಖ ವಿರುದ್ಧ ದೂರು ನೀಡಿದ ವ್ಯಕ್ತಿಯ ವಿರುದ್ಧವೂ ದೂರು ದಾಖಲು

hamsalekha
18/11/2021

ಬೆಂಗಳೂರು: ಹಂಸಲೇಖ ಅವರು ತಪ್ಪು ಮಾಡದಿದ್ದರೂ, ಇನ್ನೊಬ್ಬರ ಭಾವನೆಗಳಿಗೆ ಬೇಸರವಾಗಬಾರದು ಎಂದು ಕ್ಷಮೆ ಕೇಳಿ ದೊಡ್ಡವರಾಗಿದ್ದಾರೆ. ಆದರೆ ಕೆಲವರು ಹಂಸಲೇಖ ಅವರನ್ನು ನಿರಂತರವಾಗಿ ನಿಂದಿಸುತ್ತಲೇ ಇದ್ದಾರೆ. ಇತ್ತ  ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಎನ್ನಲಾಗಿರುವ ಕೃಷ್ಣರಾಜ್ ಎಂಬವರು ಹಂಸಲೇಖ ಅವರ ವಿರುದ್ಧ ದೂರು ಕೂಡ ನೀಡಿದ್ದಾರೆ. ಆದರೆ ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಹಂಸಲೇಖ ಅವರ ವಿರುದ್ಧ ದೂರು ನೀಡಿದ ಕೃಷ್ಣರಾಜ್ ವಿರುದ್ಧವೇ ದೂರೊಂದು ದಾಖಲಾಗಿದೆ.

ದಲಿತ ಮುಖಂಡ ಶಿವರಾಜ್ ಎಂಬವರು  ಕೃಷ್ಣರಾಜ್ ವಿರುದ್ಧ ದೂರು ನೀಡಿದ್ದು, ಕೃಷ್ಣ ರಾಜ್ ಅವರು ಸಮಾಜದಲ್ಲಿ ಕೋಮುವಾದವನ್ನು ಸೃಷ್ಟಿಸುತ್ತಿದ್ದು, ಅಸಮಾನತೆಯನ್ನು ಸಮರ್ಥಿಸುತ್ತಾ, ಕೋಮುಭಾವನೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಿವರಾಜ್ ಅವರು ನೀಡಿರುವ ದೂರಿನಲ್ಲಿ,  ಕೃಷ್ಣರಾಜು ಅವರು ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಹಂಸಲೇಖ ಅವರು ದಲಿತ ಸಮುದಾಯದ ಸಂರಕ್ಷಣೆಗೆ ಅಸ್ಪೃಶ್ಯತೆ ವಿರುದ್ಧ ಹೇಳಿಕೆ ನೀಡಿದರೂ, ಅಂತಹ ಹೇಳಿಕೆ ವಿರುದ್ಧ ಕೃಷ್ಣರಾಜ್ ಅವರು ನನ್ನ ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ದಾಖಲು ಮಾಡಿದ್ದಾರೆ. ಅಸಮಾನತೆ, ಮೇಲ್ಜಾತಿಯ ನಿಯಮಗಳನ್ನು ಸಮರ್ಥಿಸುತ್ತಾ, ಜಾತೀಯತೆ ಮತ್ತು ಕೋಮುವಾದವನ್ನು ಸೃಷ್ಟಿ ಮಾಡುತ್ತಿರುವ ಕೃಷ್ಣರಾಜ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೌದು ನಾನು ಕಿರುಚುವ ಬೊಬ್ಬೆ ಹೊಡೆಯುವ ‘ಕಲ್ಕಿಂಗ್ ಸ್ಟಾರ್’ | ಟೀಕಾಕಾರರಿಗೆ ದೀಪು ಶೆಟ್ಟಿಗಾರ್ ತಿರುಗೇಟು

ಉಪ್ಪಿಟ್ಟಿನಲ್ಲಿ ಹಾವಿನ ಮರಿ?: 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಸಿಎಂ ಎದುರಲ್ಲೇ ನೊಂದವರನ್ನು ಎಳೆದು ಹಾಕಲು ಮುಂದಾದ ಪೊಲೀಸರು

ಅತಿಥಿಯಾಗಲು ಸದಾ ಸಿದ್ಧ ಆತಿಥೇಯರಾಗುವಿರಾ ?

ಏಷ್ಯಾ ಪೆಸಿಫಿಕ್‌ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಡಿಜಿಟಲ್ ಬ್ರಾಂಡ್‌ ಗಳಲ್ಲಿ ಪ್ರಮುಖ ಸ್ಥಾನ ಪಡೆದ ‘ಕೂ’ ಅಪ್ಲಿಕೇಶನ್

ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್

ಇತ್ತೀಚಿನ ಸುದ್ದಿ