ದೇವಾಲಯಗಳಲ್ಲಿ ಹಣ ಕಳವುಗೈಯುತ್ತಿದ್ದ ನಾಲ್ವರು ಆರೋಪಿಗಳ ಬಂಧನ
15/03/2022
ತುಮಕೂರು: ಜಿಲ್ಲೆಯ ಹಲವು ದೇವಾಲಯಗಳಲ್ಲಿ ಹಣ ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಕೊರಟಗೆರೆ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಪಾವಗಡದ ಜುಟ್ಟ, ಜಯಪ್ಪ, ಚಿಂತಾಮಣಿಯ ಪಾಂಡು, ಆಂಧ್ರದ ಪವನ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ತುಮಕೂರು ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಗದು ಹಾಗೂ ಚಿನ್ನಾಭರಣ ದೋಚುತ್ತಿದ್ದರು.
ಈ ನಾಲ್ವರು ಆರೋಪಿಗಳು ಕೊರಟಗೆರೆ ಪಟ್ಟಣದಲ್ಲಿ ಕಳವಿಗೆ ಹೊಂಚುಹಾಕುತ್ತಿದ್ದರು. ಈ ವೇಳೆ ಕೊರಟಗೆರೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.