ದೇವಾಲಯಗಳಲ್ಲಿ ಹಣ ಕಳವುಗೈಯುತ್ತಿದ್ದ ನಾಲ್ವರು ಆರೋಪಿಗಳ ಬಂಧನ - Mahanayaka

ದೇವಾಲಯಗಳಲ್ಲಿ ಹಣ ಕಳವುಗೈಯುತ್ತಿದ್ದ ನಾಲ್ವರು ಆರೋಪಿಗಳ ಬಂಧನ

arrest
15/03/2022

ತುಮಕೂರು: ಜಿಲ್ಲೆಯ ಹಲವು ದೇವಾಲಯಗಳಲ್ಲಿ ಹಣ ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಕೊರಟಗೆರೆ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.


Provided by

ಪಾವಗಡದ ಜುಟ್ಟ, ಜಯಪ್ಪ, ಚಿಂತಾಮಣಿಯ ಪಾಂಡು, ಆಂಧ್ರದ ಪವನ್​ ಕುಮಾರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ತುಮಕೂರು ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಗದು ಹಾಗೂ ಚಿನ್ನಾಭರಣ ದೋಚುತ್ತಿದ್ದರು.

ಈ ನಾಲ್ವರು ಆರೋಪಿಗಳು ಕೊರಟಗೆರೆ ಪಟ್ಟಣದಲ್ಲಿ ಕಳವಿಗೆ ಹೊಂಚುಹಾಕುತ್ತಿದ್ದರು. ಈ ವೇಳೆ ಕೊರಟಗೆರೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ