ಹಣ ನೀಡುವಂತೆ ಪತಿ ಒತ್ತಾಯಿಸಿದರೆ ಅದು ಕಿರುಕುಳ ಅಲ್ಲ | ಬಾಂಬೆ ಹೈಕೋರ್ಟ್ ತೀರ್ಪು! - Mahanayaka
12:32 AM Wednesday 5 - February 2025

ಹಣ ನೀಡುವಂತೆ ಪತಿ ಒತ್ತಾಯಿಸಿದರೆ ಅದು ಕಿರುಕುಳ ಅಲ್ಲ | ಬಾಂಬೆ ಹೈಕೋರ್ಟ್ ತೀರ್ಪು!

31/01/2021

ನಾಗ್ಪುರ:  ಹಣ ನೀಡುವಂತೆ ಪತಿ ಒತ್ತಾಯಿಸಿದರೆ ಅದು ಕಿರುಕುಳ ಅಲ್ಲ ಎಂದು  ಮುಂಬೈ ಹೈಕೋರ್ಟ್ ನ ನಾಗ್ಪುರ ಪೀಠ ಮಹತ್ವದ ತೀರ್ಪು ನೀಡಿದ್ದು, ಹಣ ನೀಡುವಂತೆ ಕಿರುಕುಳ ನೀಡಿ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದ ಆರೋಪ ಎದುರಿಸುತ್ತಿದ್ದ ಪತಿಯನ್ನು ಆರೋಪ ಮುಕ್ತವಾಗಿಸಿ ಕೋರ್ಟ್ ತೀರ್ಪು ನೀಡಿದೆ.

ಹಣ ನೀಡುವಂತೆ ಪತ್ನಿಯನ್ನು ಒತ್ತಾಯಿಸುವುದು ಎನ್ನುವುದು ಅಸ್ಪಷ್ಟವಾಕ್ಯವಾಗಿದೆ. ಇದನ್ನು ಭಾರತದ ದಂಡ ಸಂಹಿತೆ ಕಾಯ್ದೆಯ  ಸೆಕ್ಷನ್ 498 ಎ ಅನ್ವಯ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ವಿವಾಹವಾಗಿ 9 ವರ್ಷಗಳ ಬಳಿಕ  ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ.

ಪತಿ-ಪತ್ನಿಯರ ನಡುವೆ ಜಗಳ ನಡೆಯುತ್ತಿತ್ತು. ಹಣ ನೀಡುವಂತೆ ಒತ್ತಾಯಿಸಿ ಪತಿ ಹೊಡೆಯುತ್ತಿದ್ದ ಎಂಬ ಬಗ್ಗೆ ಈಗ ಪುರಾವೆಗಳನ್ನು ನೀಡಲಾಗಿದೆ. ಆದರೆ ಆತ್ಮಹತ್ಯೆಗೂ ಇದಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಆರೋಪವನ್ನು ಮುಕ್ತಗೊಳಿಸುವಂತೆ ಮಹಿಳೆಯ ಪತಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಆರೋಪಿಯು ತನ್ನ ಪತ್ನಿಯ ಜೊತೆಗಿರಲು ಆಸಕ್ತಿಯಿಂದಿದ್ದ, ಆಕೆ ತಂದೆಯ ಮನೆಗೆ ಹೋದಾಗ ಮರಳಿ ಕರೆತಂದಿದ್ದ,  ದಾಂಪತ್ಯ ಜೀವನ ಮತ್ತೆ ಆರಂಭಿಸಲು ನೋಟಿಸ್ ನೀಡಿದ್ದ. ಅಲ್ಲದೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದ. ಸತ್ತಾಗ ಆಕೆಯ ಶವಸಂಸ್ಕಾರವನ್ನು ತಾನೇ ಮಾಡಿದ್ದ ಎಂದು ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ಸುದ್ದಿ