ಬ್ರೇಕಿಂಗ್ ನ್ಯೂಸ್: ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನ - Mahanayaka
10:07 AM Thursday 12 - December 2024

ಬ್ರೇಕಿಂಗ್ ನ್ಯೂಸ್: ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನ

udasi
08/06/2021

ಬೆಂಗಳೂರು:  ರಕ್ತ ಸಂಬಂಧಿ ಕಾಯಿಲೆಯಿಂದ  ಬಳಲುತ್ತಿದ್ದ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ. ಉದಾಸಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

15 ದಿನದ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೆಲ್ತ್​ ಸಿಟಿ ಆಸ್ಪತ್ರೆಗೆ 81 ವರ್ಷ ವಯಸ್ಸಿನ ಉದಾಸಿ ಅವರು ರಕ್ತ ಸಂಬಂಧಿತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ  ನಿಧನರಾಗಿದ್ದಾರೆ.

1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದರು.  ಈ ಹಿಂದೆ ಯಡಿಯೂರಪ್ಪನವರ ಸರ್ಕಾರದಲ್ಲಿ 6 ಬಾರಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಗೆಲುವು ಪಡೆದಿದ್ದರು.

ಇತ್ತೀಚಿನ ಸುದ್ದಿ