ಕರೆಂಟ್ ಬಿಲ್ ಎಂದು ಬಂದ ಸೆಸ್ಕ್ ಸಿಬ್ಬಂದಿಗೆ ಕೈ ಗ್ಯಾರಂಟಿ ಶಾಕ್: ಗ್ರಾಮಸ್ಥರ ತಪರಾಕಿ
ಚಾಮರಾಜನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಮೊದಲ ಗ್ಯಾರಂಟಿಯಾದ ಪ್ರತಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಯಿಂದ ಸೆಸ್ಕ್ ಸಿಬ್ಬಂದಿ ಅಸಹಾಯಕರಾಗಿದ್ದು ಬಿಲ್ ಕಟ್ಟಿ ಎಂದು ಹೋದರೆ ಗ್ರಾಮಸ್ಥರು ತಪರಾಕಿ ಹಾಕಿ ಕಳುಹಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸೆಸ್ಕ್ ಸಿಬ್ಬಂದಿಗೆ ರೈತ ಮುಖಂಡರು “ಕೈ ಗ್ಯಾರಂಟಿ ” ಶಾಕ್ ಕೊಟ್ಟಿದ್ದು ಬಿಲ್ ನ್ನೇ ಪಡೆಯದೇ ವಾಪಸ್ ಕಳುಹಿಸಿದ್ದಾರೆ.
ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವವರೆಗೂ ನಾವು ಬಿಲ್ ಪಡೆಯುವುದಿಲ್ಲ, ಸಿಬ್ಬಂದಿಗಳು ಬಿಲ್ ಕೊಡುವುದಕ್ಕೂ ಬಿಡುವುದಿಲ್ಲ. ಕಾಂಗ್ರೆಸ್ ಭರವಸೆ ಬಗ್ಗೆ ನಂಬಿಕೆ ಇಟ್ಟು ಇಡೀ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ್ದು ಐದು ಗ್ಯಾರಂಟಿಗಳಲ್ಲಿ ಉಚಿತ ವಿದ್ಯುತ್ ಗ್ಯಾರಂಟಿಯನ್ನು ತಕ್ಷಣ ಜಾರಿಗೆ ತರಬೇಕೆಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಹೇಳಿದಂತೆ ನಡೆಯಬೇಕು ಯಾವುದೇ ಕಾರಣಕ್ಕೂ ವಚನಭ್ರಷ್ಟರಾಗಬಾರದು, ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ಲನ್ನು ಜನರು ಯಾವುದೇ ಕಾರಣಕ್ಕೂ ಕಟ್ಟಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw