ಹ್ಯಾಂಡ್ ಬ್ಯಾಗ್ ನ ಭಾರ ಇನ್ನು 7 ಕಿಲೋ ಮಾತ್ರ: ಭಾರತೀಯ ವಿಮಾನ ಕಂಪನಿಗಳಿಂದ ಹೊಸ ರೂಲ್ಸ್
ಭಾರತೀಯ ವಿಮಾನ ಕಂಪನಿಗಳು ಹ್ಯಾಂಡ್ ಬ್ಯಾಗ್ ನ ಭಾರವನ್ನು 7 ಕಿಲೋಗೆ ಮಿತಿಗೊಳಿಸಿದೆ. ಅದಕ್ಕಿಂತ ಹೆಚ್ಚಿನ ಭಾರಕ್ಕೆ ಅದು ದಂಡವನ್ನು ವಿಧಿಸುತ್ತದೆ. ಇದರ ಮಧ್ಯೆಯೇ ಏರ್ ಅರೇಬಿಯಾ ವಿಮಾನ ಯಾನ ಕಂಪನಿಯು ಈ ವಿಷಯದಲ್ಲಿ ಉದಾರನೀತಿಯನ್ನು ಘೋಷಿಸಿದೆ. ಹತ್ತು ಕಿಲೋ ಭಾರವಿರುವ ಹ್ಯಾಂಡ್ ಬ್ಯಾಗಿಗೆ ಅದು ಅನುಮತಿಯನ್ನು ನೀಡುವುದಾಗಿ ಘೋಷಿಸಿದೆ.
10 ಕೆಜಿ ಹ್ಯಾಂಡ್ ಬ್ಯಾಗೇಜ್ ಅನ್ನು ಎರಡು ಬ್ಯಾಗುಗಳಲ್ಲಿ ಕೊಂಡೊಯ್ಯಬಹುದು. ಕ್ಯಾಬಿನ್ ನಲ್ಲಿ ಇಡುವ ಬ್ಯಾಗ್ ನ ಉದ್ದ 55 ಸೆಂಟಿ ಮೀಟರ್ ಮತ್ತು ಅಗಲ 40 ಸೆಂಟಿಮೀಟರ್ ವರೆಗೆ ಇರಬಹುದಾಗಿದೆ. ಸೀಟಿನ ಎದುರು ಭಾಗದಲ್ಲಿ ಇಡುವ ಬ್ಯಾಗಿನ ಎತ್ತರ 25 ಸೆಂಟಿಮೀಟರ್ ಮತ್ತು ಉದ್ದ 33 ಸೆಂಟಿಮೀಟರ್ ವರೆಗೆ ಇರಬಹುದಾಗಿದೆ ಎಂದು ಕಂಪನಿ ಹೇಳಿದೆ.
ಶಾರ್ಜಾದಿಂದ ಮತ್ತು ಈಜಿಪ್ಟ್ ಮೊರಕೋ ಮುಂತಾದ ಕಡೆಗಳಿಂದ ಹೊರಡುವ ಎಲ್ಲಾ ವಿಮಾನಗಳಿಗೂ ಈ ನಿಯಮ ಅನ್ವಯಿಸಲಿದೆ. ಇದಲ್ಲದೆ ಮಕ್ಕಳನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಯಾತ್ರಿಕರಿಗೆ ಇನ್ನೂ ಮೂರು ಕೆಜಿ ಹೆಚ್ಚುವರಿ ಭಾರವನ್ನು ಕೊಂಡೊಯ್ಯಬಹುದಾಗಿದೆ ಎಂದು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj