ತಾಕತ್ ಇದ್ರೆ ಹಂದಿ ಮಾಂಸ ಸೇವಿಸಿ ಮಸೀದಿಗೆ ಹೋಗಿ: ಸಿದ್ದರಾಮಯ್ಯಗೆ ಯತ್ನಾಳ್ ಸವಾಲು
ವಿಜಯಪುರ: ನಿಮಗೆ ತಾಕತ್ ಇದ್ದರೆ ಹಂದಿ ಮಾಂಸ ಸೇವಿಸಿ ಮಸೀದಿಗೆ ಹೋಗಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಮಾಂಸ ಸೇವನೆ ಮಾಡಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದೊಂದು ದೇಗುಲಗಳಲ್ಲಿ ಒಂದೊಂದು ಸಂಸ್ಕೃತಿ ನಿಯಮಗಳಿರುತ್ತವೆ. ಆ ನಿಯಮಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
ಕೆಲವು ಕಡೆ ಮೈ ಮೇಲೆ ಬಟ್ಟೆ ಹಾಕದೇ ಹೋಗಬೇಕು ಅಂತ ಇದೆ. ಬನಿಯಾನ್ ತೆಗೆದು ದೇಗುಲಕ್ಕೆ ಹೋಗುವ ಸಂಸ್ಕೃತಿ ಇದೆ. ದೇಗಲದ ಪಾವಿತ್ರ್ಯತೆ, ಒಳ್ಳೆಯದಾಗಬೇಕಾದರೆ, ಅಲ್ಲಿನ ನಿಯಮ ಪಾಲಿಸುವುದು ಎಲ್ಲರ ಜವಾಬ್ದಾರಿ ಎಂದು ಯತ್ನಾಳ್ ಹೇಳಿದರು.
ಉದ್ಧಟತನದಿಂದ ದೇವರು ನಂಬುವ ಆಸ್ತಿಕರ ಮನಸ್ಸಿಗೆ ನೋವು ಮಾಡಬಾರದು. ಸಿದ್ದರಾಮಯ್ಯ ಆಗಲಿ ಯಾರೇ ಆಗಲಿ ಆ ಕೆಲಸ ಮಾಡಬಾರದು ಎಂದು ಯತ್ನಾಳೆ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka