ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಲಾಗಿದ್ದ ಸೊತ್ತು ವಾರಿಸುದಾರರಿಗೆ ಹಸ್ತಾಂತರ
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡಿದ್ದ ಸೊತ್ತುಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಎಚ್. ವಾರೀಸುದಾರರಿಗೆ ಮಂಗಳವಾರ ಉಡುಪಿಯ ಪೊಲೀಸ್ ಕವಾಯತು ಮೈದಾನದಲ್ಲಿ ಹಸ್ತಾಂತರಿಸಲಾಯಿತು.
ಕಾರ್ಕಳ ಗ್ರಾಮಾಂತರ ಠಾಣೆಯ 1 ಪ್ರಕರಣ, ಹಿರಿಯಡ್ಕ 1, ಬೈಂದೂರು 1, ಕೊಲ್ಲೂರು 1, ಕಾಪು 1, ಕೋಟ 2, ಮಲ್ಪೆ 2, ಉಡುಪಿ ನಗರ 3, ಕುಂದಾಪುರ 5, ಪಡುಬಿದ್ರಿ 4, ಕುಂದಾಪುರ ಗ್ರಾಮಾಂತರ 4, ಬ್ರಹ್ಮಾವರ 5 ಹಾಗೂ ಮಣಿಪಾಲ ಠಾಣೆಯ 10ಪ್ರಕರಣ ಸೇರಿ ಒಟ್ಟು 40 ಪ್ರಕರಣಗಳಲ್ಲಿ ಒಟ್ಟು 74,52,170ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಈ ಪ್ರಕರಣಗಳಲ್ಲಿ 2.94ಲಕ್ಷ ರೂ. ವೌಲ್ಯದ 7 ದ್ವಿಚಕ್ರ ವಾಹನ, 68,23,810ರೂ. ವೌಲ್ಯದ 1.195ಕೆ.ಜಿ. ಚಿನ್ನ, 88510ರೂ. ವೌಲ್ಯದ 1.192ಕೆ.ಜಿ. ಬೆಳ್ಳಿ, 75,700ರೂ. ವೌಲ್ಯದ 10 ಮೊಬೈಲ್ ಫೋನು ಮತ್ತು 1,70,150ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿಗಳಾದ ದಿನಕರ್ ಪಿ.ಕೆ., ಕೆ.ವಿ.ಬೆಳ್ಳಿಯಪ್ಪ, ಅರವಿಂದ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw