ಹಾರ್ಡ್ ವರ್ಕ್ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ: ಕೆಎಎಸ್ ಗೆ ಆಯ್ಕೆಯಾದ ಮಹೇಶ ಗಸ್ತೆ
ಬೆಂಗಳೂರು: ಹಾರ್ಡ್ ವರ್ಕ್ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ. ಹಾಗಾಗಿ ಮುಂದೆ ಇಟ್ಟ ಹೆಜ್ಜೆಯನ್ನು ಯಾವತ್ತೂ ಹಿಂದೆತೆಯಬಾರದು ಎಂದು ಕೆಎಎಸ್ ಗೆ ಆಯ್ಕೆಯಾಗಿರುವ ಮಹೇಶ ಗಸ್ತೆ ಅವರು ಹೇಳಿದರು.
ಅಕ್ಕ ಐಎಎಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಬಂಟರ ಭವನದಲ್ಲಿ ಆಯೋಜಿಸಿದ್ದ 2017—18ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಣ್ಣ ಹಳ್ಳಿಯಿಂದ ನಾನು ಬಂದವನು. ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ಹಳ್ಳಿ ಮಹಾರಾಷ್ಟ್ರ ಗಡಿಯಿಂದ ಕೇವಲ 11 ಕಿ.ಮೀ. ದೂರದಲ್ಲಿತ್ತು. ಅಲ್ಲೇ ಎಸೆಸೆಲ್ಸಿ ಮುಗಿಸಿದೆ ಎಂದು ತಿಳಿಸಿದರು.
ನಾನು ಪಿಯುಸಿ ಬೇಸ್ ಮೇಲೆ ಎಕ್ಸಾಂ ಬರೆದು ಪೊಲೀಸ್ ಕಾನ್ ಸ್ಟೇಬಲ್ ಆಗಿ ಬೆಳಗಾವಿ ಸಿಟಿ ಮಾರ್ಕೆಟ್ ನಲ್ಲಿ ಅಪಾಯಿಂಟ್ ಆದೆ. 3 ತಿಂಗಳು ಟ್ರೈನಿಂಗ್ ಮಾಡಿ, 3 ತಿಂಗಳು ಕೆಲಸ ಮಾಡಿ, ಅದಕ್ಕೆ ರಿಸೈನ್ ಮಾಡಿದೆ. ಬಳಿಕ ಬಿಎಸ್ ಸಿ ಮುಗಿಸಿ ಬಿ’ಎಡ್ ಗೆ ಮೈಸೂರಿಗೆ ಬಂದೆ. ಆ ಸಂದರ್ಭದಲ್ಲಿ ನನಗೆ ಡಾ.ಶಿವಕುಮಾರ(ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರು) ಪರಿಚಯ ಆದ್ರು ಎಂದರು.
ಬಿಎಡ್ ಮಾಡಿದ ತಕ್ಷಣವೇ ಕೇಂದ್ರೀಯ ವಿದ್ಯಾಲಯಕ್ಕೆ ನನಗೆ ಅಪಾಯಿಂಟ್ ಮೆಂಟ್ ಆಯಿತು. ಕೇಂದ್ರೀಯ ವಿದ್ಯಾಲಯ ಮಣಿಪುರಕ್ಕೆ ಹೋದೆ, ಅಲ್ಲಿ ಫೂಡ್ ವೆದರ್ ಎರಡೂ ನನಗೆ ಅಡ್ಜೆಸ್ಟ್ ಆಗ್ಲಿಲ್ಲ ಅದನ್ನು ಬಿಟ್ಟು ಬಂದು ಬಿಟ್ಟೆ ಎಂದರು.
ಬಳಿಕ ನಾನು ನವೋದಯ ವಿದ್ಯಾಲಯಕ್ಕೆ ಹೋದೆ. ಬಳಿಕ ಸ್ಟೇಟ್ ಸಿಲಬಸ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷೆ ಬರೆದೆ. ಅದರಲ್ಲಿ ಪಾಸ್ ಆದೆ. ಆ ಮೇಲೆ ನವೋದಯ ವಿದ್ಯಾಲಯಕ್ಕೂ ರಿಸೈನ್ ಮಾಡಿದೆ. ಆನಂತರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಓದಿ, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕನಾಗಿ ಬಂದೆ. 2016ರಲ್ಲಿ ಎಲ್ಲದಕ್ಕೂ ಸಂಪೂರ್ಣವಾಗಿ ರಿಸೈನ್ ಮಾಡಿದೆ. ಆ ಬಳಿಕ ನಾನು ಮತ್ತೆ ಡಾ.ಶಿವಕುಮಾರ ಅವರ ಬಳಿಗೆ ಬಂದೆ. ಅವರು ನನ್ನನ್ನು ಮನೆಯಲ್ಲಿ ಇಟ್ಟುಕೊಂಡು, ಅನ್ನ ನೀಡಿ ಮತ್ತು ಅಕ್ಷರವನ್ನು ಕಲಿಸಿದಂತಹ ಗುರುಗಳು ಎಂದರು.
ನನ್ನ ಜೀವನದಲ್ಲಿ ರಿಯಲ್ ಸೂಪರ್ ಸ್ಟಾರ್ ಅಂದ್ರೆ, ನಾಲ್ಕು ಜನರಿದ್ದಾರೆ. ನನ್ನ ತಾಯಿ, ನಂತರ ನನ್ನ ಕಾಕ ನಂತರ 3ನೇಯದು ಅಣ್ಣ(ಡಾ.ಶಿವಕುಮಾರ), ನಾಲ್ಕನೆಯದು ನನ್ನ ಫ್ರೆಂಡ್ಸ್ ಮತ್ತು ನನ್ನ ವೈಫ್. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರು ಎಂದರು.
ನಾನು ಮೊನ್ನೆ ಇಂಟರ್ ವ್ಯೂವ್ ಗೆ ಹೋಗಿದ್ದೆ. ನಮ್ಮ ಇಂಟರ್ ವ್ಯೂವ್ ಬೋರ್ಡ್ ಮೆಂಬರ್, 3-4 ಡೇಸ್ ಆದ ಮೇಲೆ ಬಿ ಎಸ್ ಸಿ ಅಥವಾ ಬಿಎ ಮಾಡಿದ ಕ್ಯಾಂಡಿಡೇಟ್ ನೀನೊಬ್ನೆ ನೋಡಪ್ಪ ಅಂದ್ರು. ಮ್ಯಾಕ್ಸಿಮಮ್ ಜನರೆಲ್ಲರೂ ಎಂಬಿಬಿಎಸ್, ಎಂಜಿನಿಯರ್ ಕ್ಯಾಂಡಿಡೇಟ್ಸ್ ಈ ಸಲ ಬಂದಿದ್ರು ಎಂದು ಅವರು ನೆನಪಿಸಿಕೊಂಡರು.
ನನಗೆ ಈಗ 35 ವರ್ಷ. ಈಗ ನಾನು ಕೆಎಎಸ್ ಗೆ ಆಯ್ಕೆಯಾಗಿದ್ದೇನೆ. ಒಂದೇ ಸಲ ಸಕ್ಸಸ್ ಸಿಗಬೇಕು ಅಂತ ಬಯಸಬೇಡಿ, ಯಾರಿಗಾದ್ರೂ ಸಕ್ಸಸ್ ಬೇಗನೇ ಸಿಕ್ಕಿತು ಅಂದ್ರೆ, ನಿಜವಾಗ್ಲೂ ಅವರು ಅದೃಷ್ಟವಂತರು. ಒಂದು ಸಲ ಮುಂದೆ ಬಂದ ಬಳಿಕ ಹಿಂದೆ ಹೆಜ್ಜೆ ಇಡಬಾರದು. ಸಾಧ್ಯವಾದಷ್ಟು ಕಷ್ಟ ಬಂದದ್ದನ್ನು ಸ್ವೀಕರಿಸಿ, ಮುಂದೊಂದು ದಿನ ಒಳ್ಳೆಯ ದಿನ ಬಂದೇ ಬರುತ್ತದೆ ಎಂದು ನಂಬಿಕೆ ಇಟ್ಟುಕೊಂಡು ಬದುಕಬೇಕು ಎಂದರು.
ವಿಡಿಯೋ ನೋಡಿ:
“ಇಂದು ನನಗೆ ಸನ್ಮಾನ ಮಾಡಿದಾಗ ನಾನು ಅಣ್ಣ(ಡಾ.ಶಿವಕುಮಾರ) ಅವರಿಗೆ ಹೇಳಿದೆ. ಈ ಸನ್ಮಾನ ನನಗೆ ಸಲ್ಲಬೇಕಾದದ್ದು ಅಲ್ಲ, ನಿಮಗೆ ಸಲ್ಲಬೇಕಾದದ್ದು ಅಂತ”.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka