ಸೇತುವೆ ಇಲ್ಲ: ತೋಡಿನಲ್ಲಿ ವೃದ್ಧೆಯನ್ನು ಸ್ಟ್ರೆಚರ್ ಮೂಲಕ ಸಾಗಿಸುವ ದುಸ್ಥಿತಿ

jalsur
16/07/2021

ಸುಳ್ಯಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಸ್ಟ್ರೆಚರ್ ಮೂಲಕ ಎತ್ತಿಕೊಂಡು ತೋಡು ದಾಟಿಸುವ ಅನಿವಾರ್ಯತೆ ಎದುರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನಲ್ಲಿ ನಡೆದಿದೆ.

70 ವರ್ಷ ವಯಸ್ಸಿನ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಮಂಗಳವಾರ ಮನೆಯ ಆವರಣ ದಲ್ಲಿ ಬಿದ್ದು, ಕಾಲಿಗೆ ಗಂಭೀರ ಗಾಯವಾಗಿತ್ತು. ಮನೆಯವರು ಸೇರಿಕೊಂಡು ಸ್ಟ್ರೆಚರ್ ಮೂಲಕ ಎತ್ತಿಕೊಂಡು ಹಳ್ಳ ದಾಟಿಸಿ, ಆಂಬುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಳ್ಳ ದಾಟುವ ವಿಡಿಯೊ ವೈರಲ್ ಆಗಿದೆ. ಇಲ್ಲಿನ ಹತ್ತಕ್ಕೂ ಅಧಿಕ ಮನೆ ಯವರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಪರಿಸ್ಥಿತಿ ಇದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಇತರೆ 12 ಮನೆಗಳಿವೆ. ಇಲ್ಲಿನ ನಿವಾಸಿಗಳು 60ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ನಡೆದು ಹೋಗಲು ವ್ಯವಸ್ಥೆ ಇದೆ. ಆದರೆ, ವಾಹನ ಸಂಚಾರಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕಾಲು ದಾರಿಯಲ್ಲಿ ಸಂಚರಿಸಿ, ಕಾಲುಸಂಕದ ಮೂಲಕ ಹಳ್ಳ ದಾಟುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಇತ್ತೀಚಿನ ಸುದ್ದಿ

Exit mobile version