ಹರ್ಯಾಣದಲ್ಲಿ ದಲಿತ ಸಮುದಾಯವನ್ನು ಸಂಪರ್ಕಿಸಿದ ರೈತ ಮುಖಂಡರು | ರೈತರ ಪ್ರತಿ ಮನೆಗಳಲ್ಲೂ ರಾರಾಜಿಸಲಿದೆ ಅಂಬೇಡ್ಕರ್ ಭಾವ ಚಿತ್ರ - Mahanayaka
7:58 AM Friday 20 - September 2024

ಹರ್ಯಾಣದಲ್ಲಿ ದಲಿತ ಸಮುದಾಯವನ್ನು ಸಂಪರ್ಕಿಸಿದ ರೈತ ಮುಖಂಡರು | ರೈತರ ಪ್ರತಿ ಮನೆಗಳಲ್ಲೂ ರಾರಾಜಿಸಲಿದೆ ಅಂಬೇಡ್ಕರ್ ಭಾವ ಚಿತ್ರ

21/02/2021

ಚಂಡೀಗಡ್: ರೈತರ ಪ್ರತಿಭಟನೆ ವಿಶಾಲ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿದ್ದು, ಹರ್ಯಾಣದಲ್ಲಿ ರೈತರು ಬೃಹತ್ ಸಮುದಾಯವಾದ ದಲಿತ ಸಮುದಾಯದ ಬೆಂಬಲ ಕೇಳಿದ್ದು, ಜಾತಿ ಬೇಧವನ್ನು ತೊಡೆದು ಹಾಕಲು ಹಾಗೂ ಕೃಷಿ ಕಾಯ್ದೆಯನ್ನು ತೊಡೆದು ಹಾಕಲು ಜೊತೆಯಾಗಿ ಹೋರಾಡಲು ಪರಸ್ಪರ ಕೈ ಜೋಡಿಸಲಾಗಿದೆ.

ಹರ್ಯಾಣದ ಹಿಸಾರ್ ನ ಬಾರ್ವಾಲಾ ಪಟ್ಟಣದದಲ್ಲಿ ಶನಿವಾರ ದಲಿತ ಮುಖಂಡರೊಂದಿಗೆ ಮಹಾ ಪಂಚಾಯತ್ ನಡೆದಿದ್ದು,  ಇದರಲ್ಲಿ ಕೃಷಿ ಒಕ್ಕೂಟಗಳ ಮುಖಂಡ ಗುರ್ನಾಮ್ ದಧುನಿ ಭಾಗವಹಿಸಿದ್ದಾರೆ.

ಹರ್ಯಾಣದ ಜನ ಸಂಖ್ಯೆಯಲ್ಲಿ ಶೇ.20ರಷ್ಟು ಪರಿಶಿಷ್ಟ ಜಾತಿಯೇ ಇದೆ.  ಹೀಗಾಗಿ ರೈತರು ದಲಿತರನ್ನು ಸಂಪರ್ಕಿಸಿದ್ದು, ಸಭೆಯಲ್ಲಿ ಹಲವು ಮಹತ್ವದ ತೀರ್ಮಾಣಗಳನ್ನು ಕೈಗೊಳ್ಳಲಾಗಿದೆ.


Provided by

ರೈತರು ತಮ್ಮ ಪ್ರತಿ ಮನೆಗಳಲ್ಲಿಯೂ ಆಧುನಿಕ ಭಾರತದ ನಿರ್ಮಾತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋಗಳನ್ನು ಇಡಬೇಕು.  ದಲಿತರು ಬ್ರಿಟೀಷ್ ಭಾರತದ ಪ್ರಮುಖ ಜಾಟ್ ರಾಜಕೀಯ ಮುಖಂಡ ಸರ್ ಚೋತು ರಾಮ್ ಅವರ ಚಿತ್ರವನ್ನು ತಮ್ಮ ಮನೆಗಳಲ್ಲಿ ಹಾಕಿಕೊಳ್ಳುವ ಮೂಲಕ ಪರಸ್ಪರ ಒಗ್ಗಟ್ಟಾಗುವಂತೆ ಕರೆ ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಚಧುನಿ, ನಮ್ಮ ಹೋರಾಟವು ಸರ್ಕಾರದ ವಿರುದ್ಧ ಮಾತ್ರವಲ್ಲದೇ ಬಂಡವಾಳಶಾಹಿಗಳ ವಿರುದ್ಧವೂ ಆಗಿದೆ.  ಇಲ್ಲಿನ ಸರ್ಕಾರವು ಜಾತಿ ಹಾಘೂ ಧರ್ಮದ ಹೆಸರಿನಲ್ಲಿ ಪಿತೂರಿ ನಡೆಸುತ್ತಿದೆ. ಇದನ್ನು ನಾವು ಅರಿತುಕೊಳ್ಳಬೇಕಿದೆ ಎಂದರು.

ಇತ್ತೀಚಿನ ಸುದ್ದಿ