ನೂಹ್ ನಲ್ಲಿ ವಿಎಚ್ ಪಿ ಯಾತ್ರೆ ಪುನರಾರಂಭದ ಬಗ್ಗೆ ಚರ್ಚಿಸಲು ಹಿಂದೂ ಮಹಾಪಂಚಾಯತ್ ಗೆ ಅನುಮತಿ ನಿರಾಕರಣೆ - Mahanayaka
3:27 PM Wednesday 5 - February 2025

ನೂಹ್ ನಲ್ಲಿ ವಿಎಚ್ ಪಿ ಯಾತ್ರೆ ಪುನರಾರಂಭದ ಬಗ್ಗೆ ಚರ್ಚಿಸಲು ಹಿಂದೂ ಮಹಾಪಂಚಾಯತ್ ಗೆ ಅನುಮತಿ ನಿರಾಕರಣೆ

12/08/2023

ಗಲಭೆ ಪೀಡಿತ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ ನಂತರ ನೂಹ್ ನಲ್ಲಿ ನಡೆಯಬೇಕಿದ್ದ ಹಿಂದೂ ಮಹಾಪಂಚಾಯತ್ ಈಗ ಪಲ್ವಾಲ್ ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನೂಹ್ ನಲ್ಲಿ ಹಿಂದೂ ಗುಂಪುಗಳು ಮಹಾಪಂಚಾಯತ್ ಗೆ ಅನುಮತಿ ಕೋರಿದ್ದವು. ಆದರೆ ಭದ್ರತಾ ಕಾರಣಗಳಿಂದಾಗಿ ಅದನ್ನು ನಿರಾಕರಿಸಲಾಗಿದೆ ಎಂದು ನೂಹ್ ಎಸ್ಪಿ ನರೇಂದರ್ ಬಿಜರ್ನಿಯಾ ಐಎಎನ್ಎಸ್ ಗೆ ತಿಳಿಸಿದ್ದಾರೆ. ‘ನೂಹ್ ನಲ್ಲಿ ಪರಿಸ್ಥಿತಿ ಈಗ ಶಾಂತಿಯುತವಾಗಿದೆ’ ಎಂದು ಅವರು ಹೇಳಿದರು.

ಹಿರಿಯ ವಿಎಚ್ ಪಿ ನಾಯಕ ಅರುಣ್ ಜೈಲ್ದಾರ್ ಅವರ ಮೇಲ್ವಿಚಾರಣೆಯಲ್ಲಿ ಪಲ್ವಾಲ್ ಜಿಲ್ಲೆಯಲ್ಲಿ ಭಾನುವಾರ ಹಿಂದೂ ಮಹಾಪಂಚಾಯತ್ ಆಯೋಜಿಸಲಾಗುವುದು ಎಂದು ಬಜರಂಗದಳದ ಸದಸ್ಯ ಕುಲಭೂಷಣ್ ಭಾರದ್ವಾಜ್ ಐಎಎನ್ಎಸ್ ಗೆ ತಿಳಿಸಿದ್ದಾರೆ.

‘ಮಹಾಪಂಚಾಯತ್ ನಲ್ಲಿ ನೂಹ್ ಘರ್ಷಣೆಯಿಂದಾಗಿ ಅಪೂರ್ಣವಾಗಿ ಉಳಿದಿದ್ದ ಬ್ರಜ್ಮಂಡಲ್ ಜಲಬ್ಜಿಶೇಕ್ ಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ಚರ್ಚಿಸಲಾಗುವುದು. ಸಂಘಟನೆಯ ಸದಸ್ಯರ ವಿಶ್ವಾಸವನ್ನು ಹೆಚ್ಚಿಸಲು ಮಹಾಪಂಚಾಯತ್ ಆಯೋಜಿಸಲಾಗುತ್ತಿದೆ’ ಎಂದು ಭಾರದ್ವಾಜ್ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಜ್ಮಂಡಲ್ ಜಲಬ್ಜಿಶೇಕ್ ಯಾತ್ರೆಯನ್ನು ಜುಲೈ 31 ರಂದು ನೂಹ್ ನಲ್ಲಿ ದರೋಡೆಕೋರರು ತಡೆದಿದ್ದರು. ಈ ಗಲಭೆಯಲ್ಲಿ ಆರು ಜನರು ಸಾವನ್ನಪ್ಪಿ 88 ಮಂದಿ ಗಾಯಗೊಂಡಿದ್ದರು.

‘ಮಹಾಪಂಚಾಯತ್ ಗೆ ಅನುಮತಿ ಕೋರಲಾಗಿತ್ತು. ಆದರೆ ನಾವು ಇನ್ನೂ ಯಾವುದೇ ಅನುಮತಿ ನೀಡಿಲ್ಲ. ನಾವು ಕೆಲವು ಒಳ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇವೆ. ಪರಿಸ್ಥಿತಿಯನ್ನು ನೋಡಿದ ನಂತರವೇ ನಾವು ನಿರ್ಧರಿಸುತ್ತೇವೆ’ ಎಂದು ಎಸ್ಪಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ