ನಕಲಿ ಆಟ: ಯಾರದ್ದೋ ಹೆಸರಲ್ಲಿ ಐಎಎಫ್ ಕ್ಲರ್ಕ್ ಪರೀಕ್ಷೆ ಬರೆಯುತ್ತಿದ್ದ ಯುವಕನ ಬಂಧನ
ಭಾರತೀಯ ವಾಯುಪಡೆಯ ಕ್ಲರ್ಕ್ ಪರೀಕ್ಷೆಯ ವೇಳೆ ಅಭ್ಯರ್ಥಿಯಂತೆ ನಟಿಸಲು ಯತ್ನಿಸಿದ ಹರ್ಯಾಣ ಮೂಲದ ವ್ಯಕ್ತಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ಬಂಧಿಸಲಾಗಿದೆ.
ಆವಡಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಹಲವಾರು ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಕುಳಿತಿದ್ದರು. ಹಾಲ್ ಟಿಕೆಟ್ ಗಳ ವಾಡಿಕೆಯ ತಪಾಸಣೆಯ ಸಮಯದಲ್ಲಿ, ಪರೀಕ್ಷಕರು ಅಭ್ಯರ್ಥಿಯ ಫೋಟೋ ಮತ್ತು ಹಾಜರಿದ್ದ ವ್ಯಕ್ತಿಯ ನಡುವೆ ಹೊಂದಾಣಿಕೆಯಾಗದಿರುವುದನ್ನು ಗಮನಿಸಿದರು.
ಹರಿಯಾಣ ಮೂಲದ ಪ್ರವೀಣ್ ಕುಮಾರ್ (25) ಎಂಬಾತನನ್ನು ವಿಚಾರಣೆ ನಡೆಸಿದಾಗ ತಾನು ಉತ್ತರ ಪ್ರದೇಶದ ಮೂಲ ಅಭ್ಯರ್ಥಿ ಮಹೇಂದ್ರ ಪ್ರಭು ಅವರಂತೆ ನಟಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮಹೇಂದ್ರ ಪರವಾಗಿ ಪರೀಕ್ಷೆ ಬರೆದು ತೇರ್ಗಡೆಯಾಗಲು 3 ಲಕ್ಷ ರೂ.ಗಳ ಭರವಸೆ ನೀಡಿದ್ದ ಪ್ರವೀಣ್ ಕುಮಾರ್ ನನ್ನು ಮುತ್ತಪುಡುಪೇಟೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ವಿರುದ್ಧ ವಂಚನೆ ಆರೋಪ ಹೊರಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವನು ಪರೀಕ್ಷಾ ಹಾಲ್ ಒಳಗೆ ಮೊಬೈಲ್ ಫೋನ್ ಮತ್ತು ಬ್ಲೂಟೂತ್ ಸಾಧನವನ್ನು ಅಡಗಿಸಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj