ಕಾಟೇರ ಚಿತ್ರವನ್ನು ಕಿಚ್ಚ ಸುದೀಪ್ ಈಗಾಗಲೇ ನೋಡಿದ್ದಾರೆಯೇ? - Mahanayaka

ಕಾಟೇರ ಚಿತ್ರವನ್ನು ಕಿಚ್ಚ ಸುದೀಪ್ ಈಗಾಗಲೇ ನೋಡಿದ್ದಾರೆಯೇ?

sudeep darshan
16/01/2024

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರು ಅಂತನೇ ಕರೆಯಲ್ಪಡುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿಯನಯ ಚಕ್ರವರ್ತಿ ಸುದೀಪ್ ಅವರು,  ಸುದೀಪ್ ಅವರು ಕನ್ನಡದ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯ ನಂತರ ಬೇರ್ಪಟ್ಟಿದ್ದರು. ಇದೀಗ ಮತ್ತೆ ಇವರಿಬ್ಬರು ಒಂದಾಗಲಿ ಅಂತ ಅಭಿಮಾನಿಗಳು ಆಶಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕಿಚ್ಚ ಸುದೀಪ್  ಕುತೂಹಲಕಾರಿ ಸಂದೇಶವೊಂದನ್ನು ನೀಡಿದ್ದಾರೆ. ದರ್ಶನ್ ಅವರ ಕಾಟೇರ ಚಿತ್ರವನ್ನು ಕಿಚ್ಚ ಸುದೀಪ್ ಅವರು ನೋಡಿದ್ದಾರೆಯೇ ಎನ್ನುವ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

ಕಾಟೇರ ಚಿತ್ರದ ವೀಕ್ಷಣೆಗಾಗಿ ಕಿಚ್ಚ ಸುದೀಪ್ ಅವರಿಗೂ ಆಹ್ವಾನ ನೀಡಲಾಗಿತ್ತು. ಆದ್ರೆ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಿಚ್ಚ ಸುದೀಪ್  ಸೆಲೆಬ್ರೆಟಿ ಶೋಗೆ ಬರಲಾಗುವುದಿಲ್ಲ ಎಂದು ಹೇಳಿದ್ದರು. ಶೂಟಿಂಗ್ ಮುಗಿದ ಬಳಿಕ ಕಾಟೇರ ಚಿತ್ರ ನೋಡುವುದಾಗಿ ಹೇಳಿದ್ದರು.

ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಭಿಮಾನಿಯೋರ್ವ ಸುದೀಪ್ ಅವರುಗೆ ಮ್ಯಾಡ್ ಮ್ಯಾಕ್ಸ್ ಎಂಬ ಹ್ಯಾಂಡಲ್ ನಿಂದ “ಕಾಟೇರ  ಯಾವಾಗ ನೋಡ್ತೀರಿ ಸರ್?” ಅಂತ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, “ನಾನು ಈಗಾಗಲೇ ನೋಡಿಲ್ಲ ಎಂದು ನಿಮಗೆ ಯಾರಾದರೂ ಹೇಳಿದ್ದಾರೆಯೇ? “ ಅಂತ ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಸುದೀಪ್ ಅವರು ಕಾಟೇರ ಚಿತ್ರವನ್ನು ನೋಡಿದ್ದಾರೆಯೇ ಅಂತ ಇದೀಗ ಅಭಿಮಾನಿಗಳು ಕುತೂಹಲದಿಂದ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಸ್ಯಾಂಡಲ್ ವುಡ್ ಗೆ 2 ಕಣ್ಣುಗಳಿಂದ್ದಂತೆ ಅವರಿಬ್ಬರು ಒಂದಾಗಬೇಕು, ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗವನ್ನು ಜಗತ್ತಿನ ಸಿನಿಮಾ ಲೋಕವೇ ತಿರುಗಿ ನೋಡುವಂತೆ ಮಾಡಬೇಕು ಅನ್ನೋದು ಅಭಿಮಾನಿಗಳ ಆಶಯ.

ಇತ್ತೀಚಿನ ಸುದ್ದಿ