ರಾಹುಲ್ ಗಾಂಧಿ ವಿದೇಶಕ್ಕೆ ಹೋಗ್ತಾರೆಂಬ ಸುಳ್ಳು ಪೋಸ್ಟ್: ಯಡವಟ್ಟು ಮಾಡಿ ಪೇಚಿಗೆ ಸಿಲುಕಿದ ‘ಮೋದಿ ಕ ಪರಿವಾರ’

ಜೂನ್ ನಾಲ್ಕರ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಗೆ ದೇಶ ಕಾತುರದಿಂದ ಕಾಯುತ್ತಿರುವಂತೆಯೇ ವಿಮಾನ ಒಂದರ ಬೋರ್ಡಿಂಗ್ ಪಾಸಿನ ಚಿತ್ರಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೂನ್ 5 ರಂದು ರಾಹುಲ್ ಗಾಂಧಿ ಬ್ಯಾಂಕಾಕ್ ಗೆ ಪ್ರಯಾಣಿಸಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಲಾಗುತ್ತಿದೆ. ರಾಹುಲ್ ಗಾಂಧಿಯ ಬ್ಯಾಂಕಾಕ್ ಪ್ರಯಾಣಕ್ಕೆ ಆಧಾರವಾಗಿ ಒಂದು ಬೋರ್ಡಿಂಗ್ ಪಾಸಿನ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.
ಮೋದಿ ಕ ಪರಿವಾರ ಎಂಬ ಎಕ್ಸ್ ಖಾತೆಯಲ್ಲಿ ಮೊದಲ ಬಾರಿ ಬೋರ್ಡಿಂಗ್ ಪಾಸ್ ಟಿಕೆಟ್ ಪ್ರಚಾರ ಮಾಡಲಾಗಿದೆ. ಆದರೆ ಈ ಬೋರ್ಡಿಂಗ್ ಪಾಸ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ನಕಲಿ ಎಂದು ಗೊತ್ತಾಗಿದೆ.. ಈ ಬೋರ್ಡಿಂಗ್ ಪಾಸ್ ಚಿತ್ರದಲ್ಲಿ ಎರಡು ಫ್ಲೈಟ್ ನಂಬರ್ ಗಳಿವೆ. ಯುಕೆ 121 ಮತ್ತು ಯುಕೆ 115 ಎಂಬ ಎರಡು ನಂಬರ್ ಗಳು ಬೋರ್ಡಿಂಗ್ ಪಾಸಿನಲ್ಲಿದೆ. 2019ರ ಬೋರ್ಡಿಂಗ್ ಪಾಸ್ ಅನ್ನು ಎಡಿಟಿಂಗ್ ಮಾಡಿ ಹೀಗೆ ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣಿಸುತ್ತಾರೆ ಎಂಬ ಭಾವ ಬರುವಂತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth