ಜಾಮೀನು ಅರ್ಜಿಗಳನ್ನು ವರ್ಷಗಟ್ಟಲೆ ಬಾಕಿ ಇರಿಸುವ ನ್ಯಾಯಾಲಯಗಳ ಅಭ್ಯಾಸಕ್ಕೆ ಅಂತ್ಯ ಹೇಳಿತೇ ಸುಪ್ರೀಂ ಕೋರ್ಟ್ ನ ಈ ತೀರ್ಪು?
ಜಾಮೀನು ಅರ್ಜಿಗಳನ್ನು ವರ್ಷಗಟ್ಟಲೆ ಬಾಕಿ ಇರಿಸುವ ನ್ಯಾಯಾಲಯಗಳ ಅಭ್ಯಾಸಕ್ಕೆ ಸುಪ್ರೀಂ ಕೋರ್ಟ್ ಕೊನೆ ಹಾಡುವ ತೀರ್ಪು ನೀಡಿದೆ. ಜಾಮೀನು ಅರ್ಜಿಯನ್ನು ಇತ್ಯರ್ಥ ಪಡಿಸುವಲ್ಲಿ ಒಂದು ದಿನ ವಿಳಂಬವಾದರೂ ಅದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಖಡಕ್ಕಾಗಿ ಹೇಳಿದೆ.
ಈ ತೀರ್ಪು ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ತುರ್ತು ಪರಿಗಣನೆಗೆ ಕಾರಣವಾಗುತ್ತೋ ಅನ್ನುವ ಆಶಾವಾದ ಮೂಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಬಿ ಆರ್ ಗವಾಯಿ ಮತ್ತು ಕೆ ಕೆ ವಿಶ್ವನಾಥನ್ ಅವರ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ತನ್ನ ಜಾಮೀನು ಅರ್ಜಿಯು ಕಳೆದ ವರ್ಷದ ಆಗಸ್ಟ್ ನಿಂದಲೂ ಅಲಹಾಬಾದ್ ಹೈ ಕೋರ್ಟ್ ನಲ್ಲಿ ಬಾಕಿಯಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿ ವ್ಯಕ್ತಿಯೋರ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ತನ್ನ ಅರ್ಜಿಯನ್ನು ಯಾವುದೇ ಪರಿಣಾಮಕಾರಿ ಕಾರಣ ಇಲ್ಲದೆ ಪದೇಪದೇ ಮುಂದೂಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj