ದೇವರ ದರ್ಶನ ಮಾಡಿಕೊಂಡು ಬರುತ್ತಿದ್ದ ವೇಳೆ ಭೀಕರ ಅಪಘಾತ: ಮಕ್ಕಳು ಸಹಿತ 9 ಮಂದಿಯ ದಾರುಣ ಸಾವು
ಹಾಸನ: ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಣಾವರ ಹೋವಳಿಯ ಹಳ್ಳಿಕೆರೆ ಗ್ರಾಮದ ಬಳಿ ಭೀಕರ ಸರಣಿ ಅಪಘಾತವೊಂದು ಸಂಭವಿಸಿದ್ದು, ಪರಿಣಾಮವಾಗಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸರ್ಕಾರಿ ಬಸ್, ಹಾಲಿನ ಟ್ಯಾಂಕರ್ ಹಾಗೂ ಟೆಂಪೂ ಟ್ರಾವೆಲರ್ ನಡುವೆ ಈ ಭೀಕರ ಅಫಾತ ಸಂಭವಿಸಿದೆ. 9 ಜನ ಮೃತರ ಪೈಕಿ 7 ಜನರು ಒಂದೇ ಗ್ರಾಮದವರಾಗಿದ್ದು, ಇನ್ನಿಬ್ಬರು ಮತ್ತೊಂದು ಗ್ರಾಮದವರು ಎಂದು ತಿಳಿದು ಬಂದಿದೆ.
ದೊಡ್ಡೇನಹಳ್ಳಿಯ ಧ್ರುವಾ(2), ತನ್ಮಯ್(10), ಸಾಲಾಪುರದ ಲೀಲಾವತಿ(50), ಚೈತ್ರಾ(33), ಸಮರ್ಥ(10), ಡಿಂಪಿ(12), ವಂದನಾ(20), ದೊಡ್ಡಯ್ಯ(60), ಭಾರತಿ(50) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ಊರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಪುಟಾಣಿ ಕಂದಮ್ಮಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಎಂದು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka