ಹಾಸನಕ್ಕೂ ವ್ಯಾಪಿಸಿದ ಹಿಜಾಬ್-ಕೇಸರಿ ವಿವಾದ!
ಹಾಸನ: ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ಹಾಸನಕ್ಕೂ ವ್ಯಾಪಿಸಿದ್ದು, ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಹಾಗೂ ಬುರ್ಕಾ ಧರಿಸಿಕೊಂಡು ಕಾಲೇಜಿಗೆ ಆಗಮಿಸಿದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿರುವ ಬಗ್ಗೆ ವರದಿಯಾಗಿದೆ.
ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಈ ವಿವಾದ ಆರಂಭವಾಗಿದ್ದು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಈ ಬಗ್ಗೆ ಪ್ರಶ್ನಿಸದೇ ಸುಮ್ಮನಿದ್ದಾರೆ ಎಂದು ಹೇಳಲಾಗಿದೆ.
ಅವರು ಹಿಜಾಬ್ ತೆಗೆದರೆ ನಾವು ಕೇಸರಿ ಶಾಲು ತೆಗೆಯುತ್ತೇವೆ. ಕಾಲೇಜಿಗೆ ಮೊದಲು ಅವರೇ ಹಿಜಾಬ್ ಹಾಕಿಕೊಂಡು ಬಂದಿದ್ದಾರೆ. ಅವರ ಧರ್ಮ ಮನೆಯಲ್ಲಿಟ್ಟುಕೊಳ್ಳಲಿ, ಕಾಲೇಜಿನಲ್ಲಿ ಧರ್ಮ ತೋರಿಸಿದರೆ, ನಾವೂ ಹಿಂದೂ ಧರ್ಮವನ್ನು ತೋರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಜೆಪಿ ಸೋಲಿಸಿ, ಸಿಎಂ ಯೋಗಿಯನ್ನು ಉತ್ತರಾಖಂಡಕ್ಕೆ ವಾಪಸ್ ಕಳುಹಿಸಿ: ಅಖಿಲೇಶ್ ಯಾದವ್
ಕೌಟುಂಬಿಕ ಹಿಂಸಾಚಾರ ಆರೋಪ: ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ಪೆರು ಪ್ರಧಾನಿ ವಜಾ