ಹಸೆಮಣೆ ಏರಬೇಕಿದ್ದ ಯುವಕ ಕೊವಿಡ್ ಗೆ ಬಲಿ | ಮದುವೆಯ ದಿನವೇ ಕೊನೆಯುಸಿರೆಳೆದ ಯುವಕ

29/04/2021
ಚಿಕ್ಕಮಗಳೂರು: ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧನಾಗಿದ್ದ ಯುವಕನೋರ್ವ ಕೊವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.
3 ವರ್ಷ ವಯಸ್ಸಿನ ಪೃಥ್ವಿರಾಜ್ ಮೃತಪಟ್ಟ ಯುವಕನಾಗಿದ್ದು, 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬಂದಿದ್ದರು. ಅವರಿಗೆ ಕೊವಿಡ್ ಪಾಸಿಟಿವ್ ಆಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಪೃಧ್ವಿರಾಜ್ ಅವರಿಗೆ ಮದುವೆ ಫಿಕ್ಸ್ ಆಗಿತ್ತು. ಅಂದುಕೊಂಡಂತಾಗಿದ್ದರೆ, ಇಂದು ಅವರು ಹಸೆಮಣೆ ಏರಬೇಕಿತ್ತು. ಆದರೆ, ತಮ್ಮ ಮದುವೆಯ ದಿನಾಂಕದಂದೇ ಅವರು ನಿಧನರಾಗಿದ್ದಾರೆ. ಈ ಸಾವಿನಿಂದ ಪೋಷಕರು ಸಂಬಂಧಿಕರು ಕಂಗಾಲಾಗಿದ್ದಾರೆ.