ಹಾಸಿಗೆ ಸಿಗದೇ ಆಸ್ಪತ್ರೆಯಲ್ಲಿ ಪರದಾಡಿದ ಸಾಲುಮರದ ತಿಮ್ಮಕ್ಕ

salumarada timmakka
23/04/2021

ಬೆಂಗಳೂರು: ಬೆನ್ನು ನೋವಿನ ಕಾರಣ ಅಪೋಲೊ ಆಸ್ಪತ್ರೆಗೆ ಆಗಮಿಸಿದ್ದ ಸಾಲುಮರದ ತಿಮ್ಮಕ್ಕ ಹಾಸಿಗೆ ಸಿಗದೆ ಎರಡು ಗಂಟೆಗಳ ಕಾಲ ಪರದಾಟ ನಡೆಸಿದ ಘಟನೆ ವರದಿಯಾಗಿದ್ದು,  ಆಸ್ಪತ್ರೆ ತುಂಬಾ ರೋಗಿಗಳು ತುಂಬಿದ್ದರಿಂದಾಗಿ ಬೆಡ್  ಸಮಸ್ಯೆ ತಲೆದೋರಿದೆ.

ಬಚ್ಚಲು ಮನೆಯಲ್ಲಿ ಬಿದ್ದ ಕಾರಣ ಸಾಲುಮರದ ತಿಮ್ಮಕ್ಕ ಅವರಿಗೆ ಬೆನ್ನಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಇದೇ ಕಾರಣದಿಂದಾಗಿ ಇದೀಗ ಮತ್ತೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲು ಕರೆತರಲಾಗಿತ್ತು.

ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳೇ ತುಂಬಿದ್ದರಿಂದಾಗಿ ನಾನ್ ಕೋವಿಡ್ ರೋಗಿಗಳ ಹಾಸಿಗೆ ಹೊಂದಿಸುವುದು ಕಷ್ಟಕರವಾಗಿತ್ತು. ಇದರಿಂದಾಗಿ ಎರಡು ಗಂಟೆಗಳ ಕಾಲ ಹಾಸಿಗೆ ಸಿಗದೇ ಸಾಲುಮರದ ತಿಮ್ಮಕ್ಕ ಪರದಾಡಿದ್ದಾರೆ. ಈ ವೇಳೇ ಆಸ್ಪತ್ರೆಯ ವೈದ್ಯರು ಹರಸಾಹಪಟ್ಟು ಕೊನೆಗೂ ಬೆಡ್ ಹೊಂದಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version