ಹಸುಗಳ ಮೇಲೆ ಆಸಿಡ್ ದಾಳಿ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು

cow
09/07/2021

ಕೊಠಮಂಗಲಂ:  ಹಸುಗಳ ಮೇಲೆ ಆಸಿಡ್ ಸುರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಕೇರಳದ ಕವಲಂಗಡ್ ಪಂಚಾಯತ್ ನ ತಲಕ್ಕೋಟ್ ಚುಲ್ಲಿಕಂಡಂ ಪ್ರದೇಶದಲ್ಲಿ ನಡೆದಿದ್ದು, ಸಮಾಜ ವಿರೋಧಿ ಪುಂಡರ ಕೃತ್ಯದ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈವರೆಗೆ ಒಂದೇ ಪ್ರದೇಶದಲ್ಲಿ ನಾಲ್ಕು ಹಸುಗಳ ಮೇಲೆ ಆಸಿಡ್ ಸುರಿದು ಕ್ರೌರ್ಯ ಮೆರೆಯಲಾಗಿರುವ ಬಗ್ಗೆ  ಪೊಲೀಸರಿಗೆ ದೂರುಗಳು ದೊರೆತಿವೆ ಎಂದು ಹೇಳಲಾಗಿದೆ.  ಮೂಕ ಹಸುಗಳ ಮೇಲೆ ಇಂತಹ ಹಲವು ರೀತಿಯ ದಾಳಿಗಳು ಇಲ್ಲಿ ನಡೆಯುತ್ತಲೇ ಇದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.

ಹಸುಗಳ ಮೈಮೇಲೆ ಆಸಿಡ್ ಸುರಿದ ಪರಿಣಾಮ ಅವುಗಳು ತೀವ್ರ ಸುಟ್ಟ ಗಾಯಗಳಿಂದ ನರಕಯಾತನೆ ಅನುಭವಿಸುತ್ತಿವೆ. ಇಂತಹ ಅಮಾನವೀಯ ಘಟನೆಯ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version