ಹತ್ರಾಸ್ ದುರಂತ: ಪೋಸ್ಟ್ ಮಾರ್ಟಮ್ ವರದಿಯಲ್ಲಿ ಭಯಾನಕ ಮಾಹಿತಿ ಬಹಿರಂಗ - Mahanayaka

ಹತ್ರಾಸ್ ದುರಂತ: ಪೋಸ್ಟ್ ಮಾರ್ಟಮ್ ವರದಿಯಲ್ಲಿ ಭಯಾನಕ ಮಾಹಿತಿ ಬಹಿರಂಗ

04/07/2024

ಹತ್ರಾಸ್ ನಲ್ಲಿ ನಡೆದ ಘೋರ ಕಾಲ್ತುಳಿತದ ಕುರಿತು ತನಿಖಾ ವರದಿಗಳು ಹೊರ ಬರುತ್ತಿವೆ. ಸಾವಿರಾರು ಜನರನ್ನು ಒಂದು ಸಣ್ಣ ಪ್ರದೇಶದಲ್ಲಿ ಸೇರಿಸಿದ್ದರಿಂದ ಜನರಿಗೆ ಉಸಿರಾಡಲು ಕಷ್ಟವಾಯಿತು. ಕುಸಿದು ಬೀಳಲು ಪ್ರಾರಂಭಿಸಿದರು. ಇದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು ಎಂದು ತನಿಖಾ ವರದಿ ಹೇಳುತ್ತಿದೆ.


Provided by

ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿನ ಎಂಟು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಪ್ರಕಾರ, “ಬಹುತೇಕ ಮರಣೋತ್ತರ ಪರೀಕ್ಷೆಯ ವರದಿಗಳಲ್ಲಿ ಹೆಚ್ಚಿನ ಜನರು ಎದೆಯ ಗಾಯಗಳು, ಆಂತರಿಕ ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಗಮನಿಸಲಾಗಿದೆ. ಎದೆಯ ಬಳಿ ರಕ್ತ, ಪಕ್ಕೆಲುಬಿನ ಛಿದ್ರ ಅಥವಾ ರಕ್ತಸ್ರಾವದ ಕಾರಣದಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂಬುದು ಪೋಸ್ಟ್ ಮಾರ್ಟಮ್ ವರದಿಗಳಲ್ಲಿ ಕಂಡುಬಂದಿವೆ” ಎಂದು ವೈಧ್ಯರು ದೃಢಪಡಿಸಿದ್ದಾರೆ.

ಕಾಲ್ತುಳಿತ ಪ್ರಕರಣದ ನಂತರ, ಅನೇಕ ವಿಚಾರಗಳು ಹೊರ ಬರುತ್ತಿವೆ. 80 ಸಾವಿರ ಜನರನ್ನು ಸೇರಿಸಲು ಮಾತ್ರ ಅನುಮತಿಯಿದ್ದ ಕಾರ್ಯಕ್ರಮಕ್ಕೆ ಎರಡುವರೆ ಲಕ್ಷ ಜನರು ಸೇರುವ ಮೂಲಕ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಕಾಲ್ತುಳಿತಕ್ಕೆ ಸಿಲುಕಿ 121 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು- ನೋವಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ