ಹವಾಮಾನ ವೈಪರೀತ್ಯದಿಂದ ಜನರು ನಿದ್ರೆಯನ್ನು ಕಳೆದುಕೊಳ್ಳಲಿದ್ದಾರೆ! - Mahanayaka
12:41 AM Wednesday 5 - February 2025

ಹವಾಮಾನ ವೈಪರೀತ್ಯದಿಂದ ಜನರು ನಿದ್ರೆಯನ್ನು ಕಳೆದುಕೊಳ್ಳಲಿದ್ದಾರೆ!

sleep
27/05/2022

ಹವಾಮಾನ ಬದಲಾವಣೆಯು ಮಾನವ ನಿದ್ರೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.  ಒನ್ ಅರ್ಥ್ ಜರ್ನಲ್‌ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಇದು ಬೆಳಕಿಗೆ ಬಂದಿದೆ.

ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯದ ಸಂಶೋಧಕರ ಅಧ್ಯಯನದ ಪ್ರಕಾರ, 2099 ರ ವೇಳೆಗೆ, ಹವಾಮಾನ ಬದಲಾವಣೆಯಿಂದಾಗಿ ವ್ಯಕ್ತಿಯು ವರ್ಷಕ್ಕೆ 50 ರಿಂದ 58 ಗಂಟೆಗಳ ನಿದ್ರೆಯನ್ನು ಕಳೆದುಕೊಳ್ಳುತ್ತಾನೆ.

ಬೇಸಿಗೆಯ  ರಾತ್ರಿಗಳಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ ಗಿಂತ ಹೆಚ್ಚಾದಾಗ, ನಿದ್ರೆಯ ಅವಧಿಯು ಸುಮಾರು 14 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಮತ್ತು ತಾಪಮಾನವು ಹೆಚ್ಚಾದಂತೆ, ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆಗೆ ಬೀಳುವ ಅಪಾಯವು ಹೆಚ್ಚಾಗುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

68 ದೇಶಗಳಲ್ಲಿ 47,000 ಕ್ಕೂ ಹೆಚ್ಚು ಜನರಲ್ಲಿ ಸ್ಲೀಪಿಂಗ್ ರಿಸ್ಟ್‌ಬ್ಯಾಂಡ್‌ಗಳನ್ನು ಉಪಯೋಗಿಸಿ ಮಾಡಿದ ಅಧ್ಯಯನದಲ್ಲಿ ಇದನ್ನು ಕಂಡುಹಿಡಿದಿದೆ.  ಅಂಟಾರ್ಟಿಕಾವನ್ನು ಹೊರತುಪಡಿಸಿ ಇತರ ಖಂಡಗಳಲ್ಲಿ ಅಧ್ಯಯನವನ್ನು ನಡೆಸಲಾಯಿತು.

ಬಿಸಿ ತಾಪಮಾನವು ಆರೋಗ್ಯಕರ ನಿದ್ರೆಯನ್ನು ಹಾಳುಮಾಡುತ್ತದೆ ಎಂದು  ಸಂಶೋಧನೆಯ ನೇತೃತ್ವ ವಹಿಸಿರುವ ಕೆಲ್ಟನ್ ಮೈನರ್ ನ ಅಧ್ಯಯನವು ತೋರಿಸಿದೆ.  ಆದರೆ ಮಾನವರು ಬೆಚ್ಚಗಿನ ಹವಾಮಾನಕ್ಕಿಂತ ಮಾನವರು ಶೀತ ಹವಾಮಾನಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಾರೆ ಎಂದು ಮೈನರ್ ಸ್ಪಷ್ಟಪಡಿಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜೀವನದಲ್ಲಿ ಜಿಗುಪ್ಸೆ: ದುಡುಕಿನ ನಿರ್ಧಾರ ತೆಗೆದುಕೊಂಡ ದಂಪತಿ!

ಬ್ಲಡ್ ಬ್ಯಾಂಕ್ ನಿಂದ ರಕ್ತ ಪಡೆದ ನಾಲ್ಕು ಮಕ್ಕಳಿಗೆ ಎಚ್ ಐವಿ:  ಒಂದು ಮಗು ಸಾವು

ಪರಮಾಣು ಬಾಂಬ್ ನಿಂದ ಮಾತ್ರ ಹೊಸ ಸ್ಕಾರ್ಪಿಯೋವನ್ನು ನಾಶ ಮಾಡಲು ಸಾಧ್ಯ: ಆನಂದ್ ಮಹೀಂದ್ರ

ಇಂದಿರಾ ಕ್ಯಾಂಟೀನ್ ನ್ನು ಇಸ್ಕಾನ್ ಸಂಸ್ಥೆಗೆ ವಹಿಸಿದ ರಾಜ್ಯ ಸರ್ಕಾರ!

ಕ್ರೀಮ್ ಬನ್ ನಲ್ಲಿ ಕ್ರೀಮ್ ಇಲ್ಲ, ಟೀಯಲ್ಲಿ ಬಿಸಿ ಇಲ್ಲ ಎಂದು ಜಗಳ: ಬೇಕರಿ ಮಾಲಿಕನಿಗೆ ದುಷ್ಕರ್ಮಿಗಳಿಂದ ಹಿಗ್ಗಾಮುಗ್ಗಾ ಥಳಿತ

 

 

ಇತ್ತೀಚಿನ ಸುದ್ದಿ