ಸೆಕ್ಸ್ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗ | ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ

somy ali
29/07/2021

ಮುಂಬೈ: ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡುವುದು ಕೂಡ ಒಂದು ಉದ್ಯೋಗ ಎಂದು ಸಲ್ಮಾನ್ ಖಾನ್ ನ ಮಾಜಿ ಪ್ರೇಯಸಿ ಸೋಮಿ ಅಲಿ ಹೇಳಿದ್ದು, ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದು, ನಿರ್ಮಿಸುವುದು ತಪ್ಪಲ್ಲ.  ಅದು ಕೂಡ ಒಂದು ಉದ್ಯಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪೋರ್ನ್ ಉದ್ಯಮ ಎಲ್ಲ ಉದ್ಯಮಗಳಂತೆಯೇ ಒಂದು ಉದ್ಯಮವಾಗಿದೆ. ಹಾಗಾಗಿ, ಅದನ್ನು ಉದ್ಯೋಗವಾಗಿ ಸ್ವೀಕರಿಸುವ ವ್ಯಕ್ತಿಯನ್ನು ನಾನು ಕೆಟ್ಟವನು ಎಂದು ಭಾವಿಸುವುದಿಲ್ಲ. ಲೈಂಗಿಕ ದೌರ್ಜನ್ಯ, ಮೋಸ ಮಾಡುವುದು ಅಪರಾಧವಾಗಿದೆ ಎಂದು ಸೋಮಿ ಅಲಿ ಹೇಳಿದರು.

ಲೈಂಗಿಕ ವಿಚಾರಗಳನ್ನು ನಾವು ಎಷ್ಟು ಬಚ್ಚಿಡುವುದರಿಂದ ಅದರ ಬಗ್ಗೆ ಕುತೂಹಲಗಳು ಹೆಚ್ಚುತ್ತದೆ. ಲೈಂಗಿಕತೆ ಮನುಷ್ಯನ ಸಹಜ ಪ್ರಕ್ರಿಯೆ ಹಾಗಾಗಿ ಪೋರ್ನ್ ಗೆ ಸಹ ನಿರ್ಬಂಧ ಇರಕೂಡದು. ಪೋರ್ನ್ ಹೆಸರಿನಲ್ಲಿ ಯಾರ ಮೇಲೂ ಬಲವಂತ, ದೌರ್ಜನ್ಯ ಆಗದೇ ಇದ್ದಲ್ಲಿ ಪೋರ್ನ್ ಗೆ ನನ್ನ ಸಹಮತ ಇದೆ ಎಂದು ಹೇಳಿದರು.

ಇತ್ತೀಚೆಗೆ ವೆಬ್ ಸರಣಿಗಳಲ್ಲಿ, ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿದೆ. ಹಾಗೆಯೇ ಪೋರ್ನ್  ವಿಡಿಯೋಗಳು ಕೂಡ ಸಾಮಾನ್ಯವಾಗಿದೆ ಎಂದು ಸೋಮಿ ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೇಲೆ ಕಾರಿನಲ್ಲೇ ಅತ್ಯಾಚಾರ | ಬಾಡಿಗೆ ಮನೆ ಮಾಲಿಕನಿಂದ ಕೃತ್ಯ

ಬಿಜೆಪಿಗೆ ತಲೆ ನೋವಾದ ಸ್ವಾಮೀಜಿಗಳು | ಈಶ್ವರಪ್ಪರನ್ನು ಡಿಸಿಎಂ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದು ಬಿಜೆಪಿಗೆ ಬೆದರಿಕೆ

ಅಶ್ಲೀಲ ಚಿತ್ರ ನಿರ್ಮಾಣ: ಮಧ್ಯಂತರ ಜಾಮೀನು ಕೋರಿದ ಬಾಲಿವುಡ್ ನ ಮತ್ತೋರ್ವಳು ನಟಿ

ಅಶ್ಲೀಲ ಚಿತ್ರಗಳ ವ್ಯಾಪಾರದಿಂದ ರಾಜ್ ಕುಂದ್ರಾಗೆ ದಿನವೊಂದಕ್ಕೆ ಬರುತ್ತಿದ್ದ ಆದಾಯ ಎಷ್ಟು ಲಕ್ಷ ಗೊತ್ತಾ?

ಇತ್ತೀಚಿನ ಸುದ್ದಿ

Exit mobile version