ಹಾವಿನ ಜೊತೆ ಡಾನ್ಸ್: ಸಣ್ಣ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ವೃದ್ಧ - Mahanayaka
4:27 PM Wednesday 10 - September 2025

ಹಾವಿನ ಜೊತೆ ಡಾನ್ಸ್: ಸಣ್ಣ ಯಡವಟ್ಟಿನಿಂದ ಪ್ರಾಣ ಕಳೆದುಕೊಂಡ ವೃದ್ಧ

raghunandan
07/10/2021

ಅಸ್ಸಾಂ:  ಹಾವಿನೊಂದಿಗೆ ಅಪಾಯಕಾರಿ ಆಟವಾಡಿದ 60 ವರ್ಷದ ವೃದ್ಧ ಅದೇ ಹಾವಿಗೆ ಬಲಿಯಾಗಿರುವ ಘಟನೆ  ಅಸ್ಸಾಂನಲ್ಲಿ ನಡೆದಿದ್ದು, ಹಾವಿನೊಂದಿಗೆ ಹುಚ್ಚಾಟ ಮೆರೆದ ವೃದ್ಧ,  ಹಾವನ್ನು ಹಿಡಿದುಕೊಂಡು ಕೊರಳಿಗೆ ಹಾಕಿಕೊಂಡು ಡಾನ್ಸ್ ಮಾಡಿದ್ದ. ಇದೇ ಆತನ ಸಾವಿಗೆ ಕಾರಣವಾಗಿದೆ.


Provided by

ರಘುನಂದನ್  ಎಂಬ ವ್ಯಕ್ತಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 14 ಅಡಿ ಉದ್ದದ ವಿಷಕಾರಿ ಹಾವು ಅವರಿಗೆ ಸಿಕ್ಕಿತ್ತು. ಈ ಹಾವನ್ನು ಹಿಡಿದ ಅವರು ಇಲ್ಲಿನ ಗ್ರಾಮವೊಂದರಲ್ಲಿ ಹಾವನ್ನು ಕೊರಳಿಗೆ ಸುತ್ತಿಕೊಂಡು ಡಾನ್ಸ್ ಮಾಡಿದ್ದಾರೆ.  ಹೀಗೆ ಡಾನ್ಸ್ ಮಾಡುತ್ತಾ ಊರಿನಲ್ಲೆಲ್ಲ ಸುತ್ತಿದ್ದಾರೆ.

ಇಷ್ಟರಲ್ಲೇ ಇದು ಮುಗಿದಿದ್ದರೆ ಪರವಾಗಿರಲಿಲ್ಲ. ಆದರೆ ಅವರು, ಹಾವನ್ನು ರೊಚ್ಚಿಗೆಬ್ಬಿಸಿ ತನಗೆ ಕಚ್ಚುವಂತೆ ಪ್ರಚೋದನೆ ಮಾಡಿದ್ದರು ಎನ್ನಲಾಗಿದೆ. ಆದರೆ, ಹಾವಿನ ಜೊತೆಗೆ ಸ್ಟೆಂಟ್ ನಡೆಸುತ್ತಿರುವಾಗಲೇ ರಘುನಂದನ್ ಕ್ಷಣ ಕಾಲ ಮೈಮರೆತಿದ್ದು, ಈ ವೇಳೆ ಏಕಾಏಕಿ ಹಾವು ಕಚ್ಚಿದೆ.

ಹಾವು ಕಚ್ಚಿ ಅಸ್ವಸ್ಥರಾಗಿದ್ದ ರಘುನಂದನ್ ರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ವೃದ್ಧ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇನ್ನೂ ವೃದ್ಧಗೆ ಕಚ್ಚಿದ ಹಾವನ್ನು ಸ್ಥಳಕ್ಕೆ ಬಂದಿದ್ದ ಪೊಲೀಸರು ರಕ್ಷಿಸಿದ್ದು, ಕಾಡಿಗೆ ಬಿಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ದೇವಿ ವೇಷ ಧರಿಸಿ ತ್ರಿಶೂಲ ಹಿಡಿದು ನಿಂತ ಸಂಜನಾ ಗಲ್ರಾನಿ: ಏನ್ ವಿಶೇಷ?

ಬಡ ಕುಟುಂಬದ ಪುಟಾಣಿ ರಿಷಿಕಾಳ ಚಿಕಿತ್ಸೆಗೆ ನೀವು ನೆರವಾಗುವಿರಾ?

ಉಪ ಚುನಾವಣೆ: ಹಾನಗಲ್, ಸಿಂದಗಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ

ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು

ಅರ್ಜಿ ನೀಡಲು ಬಂದ ಮಹಿಳೆಗೆ ಕಿರುಕುಳ: ಗ್ರಾ.ಪಂ. ಸದಸ್ಯನ ವಿರುದ್ಧ ದೂರು

ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ

ಇತ್ತೀಚಿನ ಸುದ್ದಿ