ರಸ್ತೆಯುದ್ದಕ್ಕೂ ಅಪಾಯರಿ ಸಲ್ಫರ್ ಸೋರಿಕೆ: ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ಜನ ಜೀವನ ನಿತ್ಯನರಕ
ಮಂಗಳೂರಿನ ಎಂಆರ್ ಪಿಎಲ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಮ್ಮೆ ಸಾಬೀತಾಗಿದೆ. ಕಂಪನಿಗೆ ಸೇರಿದ ಟ್ರಕ್ ಗಳು ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ಅಪಾಯಕಾರಿ ಸಲ್ಫರ್ ಚೆಲ್ಲಿ ಸಾಗಿದ್ದು ಬೆಳಕಿಗೆ ಬಂದಿದೆ.
ಇಲ್ಲಿನ ಕೃಷಿಕರಿಗೆ ಎಂಆರ್ ಪಿಎಲ್ ನಿಂದ ಸ್ಥಳೀಯರ ಬದುಕು ನಿತ್ಯ ನರಕವಾಗುತ್ತಿದೆ. ಎಂಆರ್ ಪಿಎಲ್ ಸುರತ್ಕಲ್ ಪ್ರದೇಶಕ್ಕೆ ಲಗ್ಗೆ ಇಟ್ಟಾಗಿನಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿನ ಸಮಸ್ಯೆ ಒಂದು ಎರಡು ಅಲ್ಲ, ಟ್ರಾಫಿಕ್ ಸಮಸ್ಯೆಯಿಂದ ಆರಂಭಗೊಂಡು ಮಾಲಿನ್ಯದವರೆಗೆ ಎಲ್ಲ ತರಹದ ತೊಂದರೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಇದರೊಂದಿಗೆ ಮತ್ತೊಂದು ಅದ್ವಾನ ಎಂಆರ್ ಪಿಎಲ್ ನಿಂದ ನಡೆದಿದೆ.
ಎಂಆರ್ ಪಿಎಲ್ ನ ಟ್ರಕ್ ಗಳು ಜೋಕಟ್ಟೆ ಜನವಸತಿ ಪ್ರದೇಶದಲ್ಲಿ ರಸ್ತೆಯುದ್ದಕ್ಕೂ ಅಪಾಯಕಾರಿ ಸಲ್ಫರ್ ಚೆಲ್ಲಿ ಸಾಗಿದೆ. ಈ ಕುರಿತು ಕಂಪನಿ ಕಡೆಯಿಂದ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಪಷ್ಟವಾಗುತ್ತಿದೆ.
ಕರ್ನಾಟಕದವರೇ ಆದ ಎಂಡಿ ಹಾಗೂ ಸ್ಥಳೀಯರೇ ಆದ ಜನರಲ್ ಮೆನೇಜರ್ ಗಳನ್ನು ಕಂಪನಿಯು ಹೊಂದಿದ್ದರೂ ಇವರು ಸ್ಥಳೀಯರ ಆರೋಗ್ಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw