ಕೋವಿಡ್ ನಂತರ ಇಂತಹ ಘಟನೆಗಳು ಆಗ್ತಿವೆ: ಸ್ಪಂದನಾ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಶೋಕ - Mahanayaka

ಕೋವಿಡ್ ನಂತರ ಇಂತಹ ಘಟನೆಗಳು ಆಗ್ತಿವೆ: ಸ್ಪಂದನಾ ನಿಧನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಶೋಕ

h.d kumaraswamy
07/08/2023

ಬೆಂಗಳೂರು: ಚಿತ್ರನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು; ಸ್ಪಂದನಾ ಅವರ ನಿಧನ ತೀವ್ರ ಆಘಾತ ಉಂಟಾಗಿದೆ. ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಬ್ಯಾಂಕಾಕ್ ಪ್ರವಾಸದಲ್ಲಿ ಹೃದಯಾಘಾತಕ್ಕೆ ತುತ್ತಾಗಿರುವುದು ನೋವಿನ ಸಂಗತಿ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಕಂಡಿರುವುದು ದುಃಖ ತಂದಿದೆ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಇದೊಂದ ಆಘಾತಕಾರಿ ಘಟನೆ. ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಆಗುತ್ತಿವೆ. ಕೋವಿಡ್ ನಂತರ ಆದ ಕೆಲ ಸಮಸ್ಯೆ, ಮನುಷ್ಯನ ದೇಹದ ಮೇಲೆ ಆಗಿರುವ ಸಮಸ್ಯೆಗಳಿಂದ ಹೀಗೆ ಆಗುತ್ತಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ, ಜಾಗೃತೆಯಿಂದ ಆರೋಗ್ಯದ ಎಚ್ಚರವಹಿಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕೆಲಸವೂ ಆಗಬೇಕು. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಕುಟುಂಬದಲ್ಲಿ ದೊಡ್ಡ ನೋವು ತರಿಸಿದೆ. ಆ ನೋವಿನಿಂದ ಹೊರ ಬರೋದು ತುಂಬಾ ಕಷ್ಟ ಎಂದು ಅವರು ಕಂಬನಿ ಮಿಡಿದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ