‘ಅಸ್ಪೃಷ್ಯರು’ ಎಂಬ ಹೇಳಿಕೆ: ಕ್ಷಮೆ ಕೇಳಲು ನಿರಾಕರಿಸಿದ ಹೆಚ್.ಡಿ.ಕುಮಾರಸ್ವಾಮಿ!
ನೆಲಮಂಗಲ: ಸಿಎಂ ಇಬ್ರಾಹಿಂ ಯಾಕೆ ಸಿಎಂ ಆಗಬಾರದು ಅವರೇನು ಅಸ್ಪೃಷ್ಯರೇ? ಎಂಬ ಕುಮಾರಸ್ವಾಮಿ ಹೇಳಿಕೆಗೆ ಅವರು ಕ್ಷಮೆ ಯಾಚಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನೆಲಮಂಗಲ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು? ಮೊನ್ನೆ ಸಿದ್ದರಾಮಯ್ಯನವರು ಶಿವಕುಮಾರ್ ಕುಳಿತುಕೊಳ್ಳೋ ವಿಚಾರಕ್ಕೆ ಅಸ್ಪೃಶ್ಯ ಅಂದಿದ್ದರು. ಅವರು ಕ್ಷಮೆ ಕೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಯಾರೋ ನಾಲ್ವರು ರಾಜಕೀಯವಾಗಿ ನನ್ನ ಬಗ್ಗೆ ಮಾತನಾಡಬಹುದು, ಯಾರು ಅಸ್ಪೃಷ್ಯರು, ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಾರೆ. ಅಂಬೇಡ್ಕರ್ ಅವರು ತಮಗಾದ ಅವಮಾನ ಮರೆಸಲು ಕಾನೂನು ನೀಡಿದ್ದಾರೆ. ಹೋರಾಟ ಮಾಡುತ್ತಿರುವವರ ಮನಸ್ಸಲ್ಲಿ ಅಸ್ಪೃಶ್ಯರು ಅಂತಾ ಭಾವನೆ ಇದೆಯಾ? ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಅಂತ ಚರ್ಚೆ ಮಾಡ್ತಾ ಇದ್ದಾರೆ. ಇವ್ರು ಯಾಕಾಗಿ ನಾವು ಅಸ್ಪೃಷ್ಯರು ಅಂತ ಹೇಳಿಕೊಳ್ಳಬೇಕು? ಹಾಗಿದ್ರೆ, ಹೋರಾಟ ಮಾಡುತ್ತಿರುವವರು ಅಸ್ಪೃಷ್ಯರು ಅಂತ ಭಾವನೆ ಇದ್ಯಾ? ಅಂಬೇಡ್ಕರ್ ಇವರಿಗೆ ಶಕ್ತಿ ನೀಡಿರುವುದು ಅಸ್ಪೃಷ್ಯರು ಅನ್ನೋಕ ಎಂದು ಪ್ರಶ್ನಿಸಿದರು.
ದಲಿತ ಸಮುದಾಯದ ಹೆಣ್ಣುಮಗಳಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ನನ್ನ ಮನೆಯಲ್ಲಿ ಮೂರು ದಿನಗಳ ಕಾಲ ನಿಲ್ಲಿಸಿದ್ದೇನೆ. ಇದು ನನ್ನ ಬದುಕು, ಇವರ ಹೋರಾಟಗಳಿಗೆಲ್ಲ ನಾನು ಹೆದರುವುದಿಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka