HDFC Bankನಲ್ಲಿ 1367 ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಿ
ಹೌಸಿಂಗ್ ಡೆವಲಪ್ಮೆಂಟ್ ಫಿನಾನ್ಸ್ ಕಾರ್ಪೋರೇಶನ್ ಲಿಮಿಟೆಡ್ (ಹೆಚ್ ಡಿಎಫ್ ಸಿ) ಪ್ರೊಬೆಷನರಿ ಅಧಿಕಾರಿ, ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯುಟಿವ್ ಹಾಗೂ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 1367 ವಿವಿಧ ಹುದ್ದೆಗಳಿದ್ದು, ಪ್ರೊಬೆಷನರಿ ಅಧಿಕಾರಿ, ಅಸಿಸ್ಟೆಂಟ್ ಮ್ಯಾನೇಜರ್, ಎಕ್ಸಿಕ್ಯುಟಿವ್ ಮೊದಲಾದ ಹುದ್ದೆಗಳು ಖಾಲಿಯಿವೆ.
ಅಭ್ಯರ್ಥಿಗಳು ಕನಿಷ್ಟ 21 ರಿಂದ ಗರಿಷ್ಟ 26 ವರ್ಷ ವಯೋಮಿತಿಯವರಾಗಿರಬೇಕು. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 58,200ರೂ ವೇತನವನ್ನು ಸಿಗಲಿದೆ. ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ https://www.hdfcbank.com/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ನಂತರ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 31,2020 ಅರ್ಜಿಯನ್ನು ಸಲ್ಲಿಸಲು ಕೊನಯ ದಿನಾಂಕವಾಗಿದೆ.