ಕಾಪಾಡಲಿಲ್ಲ ದೇವರು: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ನಾಲ್ವರು ಸಾವು | ಹಲವರು ನಾಪತ್ತೆ

27/10/2020

ಕೋಲ್ಕತ್ತಾ: ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ದೋಣಿ ಮಗುಚಿ ನಾಲ್ವರು ಮೃತಪಟ್ಟು ಹಲವರು ನಾಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಮುರಿಶಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕಾಪಾಡು ಎಂದು ದುರ್ಗಾ ದೇವಿಯನ್ನು ನಂಬಿ ಬಂದ ಭಕ್ತರು, ದುರಂತವಾಗಿ ಸಾವಿಗೀಡಾಗಿದ್ದಾರೆ. ಸುಖೇಂದು ಡೇ (21), ಪಿಕಾನ್ ಪಾಲ್ (23), ಅರಿಂದಮ್ ಬ್ಯಾನರ್ಜಿ (20) ಮತ್ತು ಸೋಮನಾಥ್ ಬ್ಯಾನರ್ಜಿ (22) ಮೃತಪಟ್ಟವರಾಗಿದ್ದಾರೆ.


 

ಘಟನೆಯಲ್ಲಿ ಇನ್ನೂ ಹಲವಾರು ಜನರು ನೀರು ಪಾಲಾಗಿದ್ದಾರೆ. ನೀರುಪಾಲಾದವರನ್ನು ರಕ್ಷಿಸಲು ಪೊಲೀಸರು ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಬಂದಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ನಾಲ್ಕು ಮೃತದೇಹಗಳನ್ನು ನೀರಿನಿಂದ ಮೇಲೆತ್ತಲಾಗಿದೆ.


ಇತ್ತೀಚಿನ ಸುದ್ದಿ

Exit mobile version