6 ತಿಂಗಳಿಂದ ಈತ ಕರೆಂಟ್ ಬಿಲ್ ಕಟ್ಟೇ ಇಲ್ಲ: ಬಿಲ್ ಕೇಳಿದ್ದಕ್ಕೆ ಲೈನ್ ಮ್ಯಾನ್ ಗೆ ಚಪ್ಪಲಿಯಿಂದ ಹೊಡೆದ
ಆತ 6 ತಿಂಗಳುಗಳಿಂದ ಕರೆಂಟ್ ಬಿಲ್ ಕಟ್ಟೇ ಇಲ್ಲ, 9,990 ರೂಪಾಯಿ ಬಿಲ್ ಬಾಕಿ ಉಳಿಸಿರುವುದೇ ಅಲ್ಲದೇ ಬಿಲ್ ವಸೂಲಿಗೆ ಬಂದ ಲೈನ್ ಮ್ಯಾನ್ ಗಳ ಜೊತೆಗೆ ಗಲಾಟೆ ಮಾಡಿ, ಕಾಂಗ್ರೆಸ್ ಗ್ಯಾರೆಂಟಿಯ ನೆಪದಲ್ಲಿ ಲೈನ್ ಮ್ಯಾನ್ ಗೆ ಅವಾಚ್ಯ ಶಬ್ದ ಬಳಸಿ ಚಪ್ಪಲಿಯಿಂದ ಹೊಡೆದಿದ್ದಾನೆ.
ಹೌದು..! ಈ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯ ಕುಕನಪಲ್ಲಿ ಗ್ರಾಮದಲ್ಲಿ. ಚಂದ್ರಶೇಖರ ಹಿರೇಮಠ ಎಂಬಾತ ಈ ನೀಚ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದಾನೆ. ವಿದ್ಯುತ್ ಬಿಲ್ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಲೈನ್ ಮ್ಯಾನ್ ಮಂಜುನಾಥ್ ಈತನ ಮನೆಗೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ಲೈನ್ ಮ್ಯಾನ್ ಮೇಲೆ ಈತ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಪಿ ಮಂಜುನಾಥ್ ಹಿರೇಮಠ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ.
‘ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಘೋಷಿತ್ತು. ಕಾಂಗ್ರೆಸ್ ಗೆದ್ದು ಒಂದು ದಿನದೊಳಗೆ ವಿವಿಧೆಡೆಗಳಲ್ಲಿ ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂಬ ಹೋರಾಟ ಆರಂಭವಾಗಿತ್ತು. ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದರು. ವಿದ್ಯುತ್ ಬಿಲ್ ನೀಡಲು ತೆರಳುವ ಸಿಬ್ಬಂದಿಯನ್ನು ತರಾಟೆಗೆತ್ತಿಕೊಳ್ಳುವುದು, ನಿಂದಿಸುವುದು ನಡೆಯುತ್ತಿತ್ತು. ಇದೀಗ ಹಲ್ಲೆಯ ಮಟ್ಟಕ್ಕೆ ಬೆಳೆದಿದೆ. ತಕ್ಷಣವೇ ಸರ್ಕಾರ ವಿದ್ಯುತ್ ಬಿಲ್ ನೀಡಲು ಹೋಗುವ ಸಿಬ್ಬಂದಿಗೆ ರಕ್ಷಣೆ ನೀಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw