ವ್ಯಕ್ತಿಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ: ಹೆಸ್ರು, ರೂಪ ಬದಲಿಸಿ ಪೊಲೀಸ್ ಆಗಿದ್ದ ಕೊಲೆಗಾರ! - Mahanayaka
11:30 AM Wednesday 12 - March 2025

ವ್ಯಕ್ತಿಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ: ಹೆಸ್ರು, ರೂಪ ಬದಲಿಸಿ ಪೊಲೀಸ್ ಆಗಿದ್ದ ಕೊಲೆಗಾರ!

10/01/2025

ಸಿನಿಮಾ ಕತೆಗಳಿಗೆ ಹೋಲುವ ರೀತಿಯಲ್ಲಿ ಓರ್ವ ವ್ಯಕ್ತಿ ಎರಡು ಮುಖದೊಂದಿಗೆ ಜೀವಿಸಿದ ಅಪರೂಪದ ಮತ್ತು ಅಚ್ಚರಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

1984ರಲ್ಲಿ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ವ್ಯಕ್ತಿ ಆ ಬಳಿಕ ತನ್ನ ಹೆಸರು ಮತ್ತು ರೂಪವನ್ನು ಬದಲಿಸಿ ಪೊಲೀಸ್ ಉದ್ಯೋಗಕ್ಕೆ ಸೇರಿಕೊಂಡು ನಕ್ತು ಯಾದವ್ ಆಗಿ 35 ವರ್ಷಗಳ ಕಾಲ ಬದುಕಿದ ಘಟನೆ ಇದು. ಇದೀಗ ಆತನನ್ನು ಬಂಧಿಸಲಾಗಿದೆ.

ಅಜಂಘಡದಲ್ಲಿ ಗೂಂಡ ವ್ಯಕ್ತಿಯಾಗಿ ಬದುಕಿದ್ದ ಈತ ಆ ಬಳಿಕ ಅಡಗಿಕೊಂಡಿದ್ದ. 1984 ಮತ್ತು 89ರ ನಡುವೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ, ಹಲ್ಲೆ ಕೃತ್ಯಗಳು ಸೇರಿದಂತೆ ಹಲವು ಪ್ರಕರಣಗಳನ್ನು ಆಗ ಪೊಲೀಸರು ಈ ಯಾದವ್ ನ ವಿರುದ್ಧ ದಾಖಲಿಸಿದ್ದರು.


Provided by

ನಾಲ್ಕನೇ ಕ್ಲಾಸ್ ವರೆಗೆ ಮಾತ್ರ ಕಲಿತಿದ್ದ ಈತ ಆ ಬಳಿಕ ಎಂಟನೇ ಕ್ಲಾಸಿನ ನಕಲಿ ಸರ್ಟಿಫಿಕೇಟ್ ಸಂಪಾದಿಸಿ ಲೋಕೈ ಯಾದವನ ಮಗ ನಂದ ಲಾಲ್ ಎಂದು ತನ್ನ ಹೆಸರನ್ನು ಬದಲಿಸಿ ಹೋಂ ಗಾರ್ಡ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದ.

ಆದರೆ ನೆರೆ ನೆರೆಮನೆಯ ವ್ಯಕ್ತಿಯೊಂದಿಗೆ 2024ಅಕ್ಟೋಬರ್ ನಲ್ಲಿ ಜಗಳ ಕಾಯುವ ಮೂಲಕ ಈತನ ನಕಲಿ ಬದುಕು ಬಹಿರಂಗಕ್ಕೆ ಬಂದಿತ್ತು. ಈತ ಎರಡು ರೀತಿಯ ಬದುಕನ್ನು ಬದುಕುತ್ತಿದ್ದಾನೆ ಎಂದು ನೆರೆಮನೆಯ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ. ಆದ್ದರಿಂದ ಈತನ ವಿರುದ್ಧ ತನಿಖೆ ನಡೆಯಿತು ಮತ್ತು ಸತ್ಯ ಬಹಿರಂಗವಾದ ಕೂಡಲೇ ಈತನನ್ನು ಕೆಲಸದಿಂದ ವಜಾ ಮಾಡಿ ಬಂಧಿಸಲಾಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ