ಸ್ನೇಹಿತನಿಗೆ ಸಾಲ ಕೊಡಿಸಿದ ತಪ್ಪಿಗೆ ಪ್ರಾಣವನ್ನೇ ಕಳೆದುಕೊಂಡ!
ಮೈಸೂರು: ಎಷ್ಟೇ ಗಟ್ಟಿಯಾದ ಸ್ನೇಹವೇ ಆಗಿರಲಿ, ವಿವೇಚನೆ ಇಲ್ಲದೇ ಸ್ನೇಹಿತರ ಜೊತೆಗೆ ವ್ಯವಹಾರ ಮಾಡಬಾರದು ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಇಲ್ಲೊಬ್ಬರು ತನ್ನ ಸ್ನೇಹಿತನಿಗೆ ಸಾಲ ಕೊಡಿಸಿದ ತಪ್ಪಿಗೆ ಇದೀಗ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರು ತಾಲೂಕಿನ ದಂಡಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ತಾಲೂಕಿನ ಮುಲ್ಲೂಪುರ ಗ್ರಾಮದ ಸಿದ್ದೇಶ್ (40) ಆತ್ಮಹತ್ಯೆಗೆ ಶರಣಾಗಿರುವವರು ಎಂದು ತಿಳಿದು ಬಂದಿದೆ.
ಸಿದ್ದೇಶ್ ತನ್ನ ಸ್ನೇಹಿತ ಮಣಿಕಂಠ ಎಂಬಾತನಿಗೆ ಬ್ಯಾಂಕ್ ನಲ್ಲಿ ಕಾರು ಹಾಗೂ ತನ್ನ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಆದರೆ ಸ್ನೇಹಿತ 2 ಕಂತು ಕಟ್ಟಿ ಸುಮ್ಮನಾಗಿದ್ದ. ಇದರಿಂದಾಗಿ ಸಾಲತೀರಿಸಿ ಎಂದು ಬ್ಯಾಂಕ್ ನವರು ಸಿದ್ದೇಶ್ ಗೆ ಕರೆ ಮಾಡುತ್ತಿದ್ದರು.
ಬ್ಯಾಂಕ್ ನವರ ಕರೆ ಹೆಚ್ಚಾಗುತ್ತಿದ್ದಂತೆಯೇ ಸಿದ್ದೇಶ್ ಮಾನಸಿಕವಾಗಿ ಕುಗ್ಗಿ ಹೋಗಿ ಇದೀಗ ವಿಡಿಯೋ ಮಾಡಿಟ್ಟು ಸಾವಿಗೆ ಶರಣಾಗಿದ್ದಾರೆ.
ತನ್ನ ಸ್ನೇಹಿತ ಮಣಿಕಂಠ ಉಪ್ಪನಹಳ್ಳಿ ಎಂಬಾತನಿಗೆ ಸಾಲ ಕೊಡಿಸಿರುವುದು ಮತ್ತು ಕಾರು ಕೊಡಿಸಿರುವ ಬಗ್ಗೆ ಸಿದ್ದೇಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾನು ದಡ್ಡತನದ ಕೆಲಸ ಮಾಡಿದೆ, ಸ್ನೇಹಿತನನ್ನು ನಂಬಿ, ನನ್ನ ಹೆಂಡತಿ ಮಕ್ಕಳನ್ನು ಬೀದಿಗೆ ಬರುವಂತೆ ಮಾಡಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಾಡಿದ ವಿಡಿಯೋದಲ್ಲಿ ಸಿದ್ದೇಶ್ ಅಳಲು ತೋಡಿಕೊಂಡಿದ್ದಾರೆ.
ಘಟನೆ ಸಂಬಂಧ ವರುಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: