ಪೆಂಗ್ವಿನ್ ನ ವಿಡಿಯೋ ನೋಡಿ ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು - Mahanayaka
7:20 PM Thursday 12 - December 2024

ಪೆಂಗ್ವಿನ್ ನ ವಿಡಿಯೋ ನೋಡಿ ಬಿದ್ದುಬಿದ್ದು ನಗುತ್ತಿರುವ ನೆಟ್ಟಿಗರು

23/01/2021

ನವದೆಹಲಿ: 8 ಪೆಂಗ್ವಿನ್ ಗಳ ಗುಂಪು ಸಮುದ್ರದ ಕಡೆಗೆ ಹೋಗುತ್ತಿರುವಾಗ ಅದಕ್ಕೆ ಎದುರಾಗಿ ಇನ್ನೊಂದು ಪೆಂಗ್ವಿನ್ ಗಳ ದೊಡ್ಡ ಗುಂಪು ಎದುರಾಗುತ್ತದೆ. ಕೆಲ ಕಾಲ ಅಲ್ಲಿಯೇ ನಿಂತ ಪೆಂಗ್ವಿನ್ ಗಳ ಗುಂಪು ಮತ್ತೆ ಮುಂದೆ ಸಾಗಿದೆ. ಈ ವೇಳೆ 8 ಪೆಂಗ್ವಿನ್ ಗಳ ಗುಂಪಿನಲ್ಲಿ ಬಂದಿದ್ದ ಒಂದು ಪೆಂಗ್ವಿನ್ ಗೆ ತನ್ನ ಗುಂಪು ಯಾವುದು ಅನ್ನುವುದು ಮರೆತು ಹೋಗಿದೆ. ಅದು ದೊಡ್ಡ ಗುಂಪಿನೊಂದಿಗೆ ಹೋಗಿದೆ. ಈ ವೇಳೆ 8 ಪೆಂಗ್ವಿನ್ ಗಳ ಗುಂಪಿನಲ್ಲಿದ್ದ ಇನ್ನೊಂದು ಪೆಂಗ್ವಿನ್  ಆ ಪೆಂಗ್ವಿನ್ ನನ್ನು ಮತ್ತೆ ತನ್ನ ಗುಂಪಿಗೆ ಕರೆದುಕೊಂಡು ಬಂದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಫಾಕ್ಲ್ಯಾಂಡ್ ದ್ವೀಪದಲ್ಲಿ ತೆಗೆದ 26 ಸೆಕೆಂಡ್ ಗಳ ವಿಡಿಯೋವನ್ನು ಇದುವರೆಗೆ 6.9 ಮಿಲಿಯನ್ ಜನ ವೀಕ್ಷಿಸಿದ್ದಾರೆ. 32.6 ಸಾವಿರ ಜನ ಲೈಕ್ ಮಾಡಿದ್ದಾರೆ. 9878 ಜನ ರೀ ಟ್ವೀಟ್ ಮಾಡಿದ್ದಾರೆ. 200 ಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಅಂಡ್ರಿಯಾ ಬಾರ್ಲೊ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಜ.11ರಂದು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ಹಾಸ್ಯದ ವಸ್ತುವಾಗಿದೆ.

 

ಇತ್ತೀಚಿನ ಸುದ್ದಿ