ಪತ್ನಿಯನ್ನು ನಿಂದಿಸಿದ್ದಕ್ಕೆ ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ! - Mahanayaka
3:57 AM Saturday 22 - February 2025

ಪತ್ನಿಯನ್ನು ನಿಂದಿಸಿದ್ದಕ್ಕೆ ತಮ್ಮನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ!

police
06/07/2023

ಬೆಂಗಳೂರು: ಪತ್ನಿಯನ್ನು ನಿಂದಿಸಿದ್ದಕ್ಕೆ ಹಲ್ಲೆ ಮಾಡಿ ತಮ್ಮನನ್ನು ಕೊಲೆಗೈದ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.

ಸೋನು ಪಾಷಾ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಮೃತ ಸೋನು ಪಾಷಾ ಹಾಗೂ ಆತನ ಸಹೋದರ ಅಕ್ರಮ್ ಗ್ಯಾರೆಜ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೇ ಏರಿಯಾದಲ್ಲಿ ಅಕ್ರಮ್ ಪತ್ನಿ ಜೊತೆ ವಾಸವಿದ್ದ. ಅಕ್ರಮ್ ಚಿಕ್ಕಪ್ಪನ ಮಗ ಫಾರೂಕ್ ಜೊತೆ ಇದೇ ತಿಂಗಳ 3ರಂದು ಜಗಳ ಮಾಡಿಕೊಂಡಿದ್ದ. ಈ ವೇಳೆ ಫಾರೂಕ್ ಕಾಲ್ ಮಾಡಿ ಅಕ್ರಮ್ ಹಾಗೂ ಆತನ ಪತ್ನಿಯ ಬಗ್ಗೆ ಅವಾಚ್ಯವಾಗಿ ನಿಂದಿಸಿ ಏರಿಯಾದಲ್ಲಿ ಗಲಾಟೆ ಮಾಡಿಕೊಂಡಿದ್ದರು.

ಇಬ್ಬರನ್ನು ರಾಜಿ ಮಾಡಲು ರಿಯಾಜ್ ಎಂಬಾತ ಇಬ್ಬರನ್ನೂ ಗೊಪಾಲಪುರದ ಗ್ಯಾರೇಜ್‍ಗೆ ಕರೆದೊಯ್ದಿದ್ದ. ಈ ವೇಳೆ ಅಕ್ರಮ್ ಜೊತೆ ಸಹೋದರ ಸೋನು ಸಹ ಬಂದಿದ್ದ. ಬಳಿಕ ಅಕ್ರಮ್ ಹಾಗೂ ಫಾರೂಕ್‍ನನ್ನು ಕರೆಸಿದ್ದ ರಿಯಾಜ್ ಗುಜುರಿ ಅಂಗಡಿಯ ಬಳಿ ಸಂಧಾನ ಮಾಡಿದ್ದ.

ಈ ವೇಳೆ ಅಲ್ಲೇ ಇದ್ದ ಸೋನು, ಫಾರೂಕ್‍ ಗೆ ಮತ್ತೆ ನಿಂದನೆ ಮಾಡಿದ್ದ. ಇದರಿಂದ ಕೋಪಗೊಂಡ ಫಾರೂಕ್ ಅಲ್ಲೇ ಇದ್ದ ರಾಡ್‍ನಿಂದ ಸೋನು ತಲೆಗೆ ಹೊಡೆದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


ಸದನದಲ್ಲಿ ಜಟಾಪಟಿ | LIVE VIDEO

ಇತ್ತೀಚಿನ ಸುದ್ದಿ