ಕೆಜಿಎಫ್, ಕಾಂತಾರ ಬಳಿಕ ಕಿಡಿ ಹತ್ತಿಸಲು ಸಜ್ಜಾದ ‘ಹೆಡ್ ಬುಷ್’

head bush
18/10/2022

ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಲು ಮತ್ತೊಂದು ಚಿತ್ರ ಸಜ್ಜಾಗಿದ್ದು, ಬಹು ನಿರೀಕ್ಷಿತ ಚಿತ್ರ  ಹೆಡ್ ಬುಷ್ ದ ಟ್ರೈಲರ್ ಬಿಡುಗಡೆಯಾಗಿದೆ.

ಚಿತ್ರದ ಟ್ರೈಲರ್ ಹೊಸತೊಂದು ಕಿಡಿ ಹತ್ತಿಸಿದ್ದು, ಚಿತ್ರಪ್ರಿಯರು ಮತ್ತೊಮ್ಮೆ ಸಿನಿಮಾ ಮಂದಿರಗಳ ಮುಂದೆ ನೂಕುನುಗ್ಗಲಿನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡುವ ಸಂದರ್ಭವನ್ನು ಹೆಡ್ ಬುಷ್ ಚಿತ್ರ ಸೃಷ್ಟಿಸಲಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಡಾಲಿ ಧನಂಜಯ್ ಅವರ ಅದ್ಭುತ ಎಂಟ್ರಿಗೆ ಜನ ಫಿದಾ ಆಗಿದ್ದು, ಅಂಡರ್ ವರ್ಲ್ಡ್ ನ ಮತ್ತೊಂದು ಕಥೆಯ ಮೂಲಕ ಅಗ್ನಿಶ್ರೀಧರ್ ಅವರು, ಕಿಡಿ ಹಚ್ಚಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಲೂಸ್ ಮಾದ ಯೋಗಿ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಾಕಷ್ಟು ಸಮಯಗಳ ಬಳಿಕ ಅಂಡರ್ ವಲ್ಡ್ ನ ಕಥೆಯೊಂದು ತೆರೆಗೆ ಅಪ್ಪಲಿಸಲಿದೆ.

ಚಿತ್ರದಲ್ಲಿ ಜಯರಾಜ್ ಪಾತ್ರ ಮಾಡುತ್ತಿರುವ ಡಾಲಿ ಧನಂಜಯ್ ಟ್ರೈಲರ್ ನಲ್ಲಿ ಚಿತ್ರಪ್ರಿಯರ ಎದೆ ನಡುಗಿಸುವ ನಟನೆ ಮಾಡಿದ್ದಾರೆ. ಕೆಜಿಎಫ್, ಕಾಂತಾರ ಬಳಿಕ ಕನ್ನಡದ ಮತ್ತೊಂದು ಚಿತ್ರ ದಾಖಲೆ ಬರೆಯಲು ಸಜ್ಜಾಗಿದೆ. ಅಕ್ಟೋಬರ್ 21ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರ ವೀಕ್ಷಣೆಗೆ ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version