ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳನ್ನು ಶೌಚಾಲಯ ಕ್ಲೀನಿಂಗ್ ಗೆ ಬಳಸಿಕೊಂಡ ಮುಖ್ಯೋಪಾಧ್ಯಾಯಿನಿ!
ಈರೋಡ್: ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಶೌಚಾಲಯ, ನೀರಿನ ಟ್ಯಾಂಕ್ ಮತ್ತು ಬಚ್ಚಲು ಶುಚಿಗೊಳಿಸಲು ಬಳಸಿದ ತಮಿಳುನಾಡಿನ ಈರೋಡ್ ನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿ, ಆಕೆಯ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈರೋಡ್ ನ ಪೆರಂದುರೈನಲ್ಲಿರುವ ಪಾಲಕ್ಕರೈ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಬಾಲಕನನ್ನು ಪೆರಂದುರೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೇಗೆ ಕಾಯಿಲೆ ಬಂದಿದೆ ಎಂಬ ಕಾರಣ ತಿಳಿಯಲು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ನಮ್ಮನ್ನು ಶಾಲೆಯ ಶೌಚಾಲಯಗಳನ್ನು ಕ್ಲೀನ್ ಮಾಡಲು ಮುಖ್ಯೋಪಾಧ್ಯಾಯರು ಬಳಸುತ್ತಿರುವುದನ್ನು ಬಾಲಕ ತಿಳಿಸಿದ್ದಾನೆ.
4ನೇ ತರಗತಿಗೆ ಸೇರಿದ ಬಳಿಕ ಬಾಲಕನನ್ನು ಶೌಚಾಲಯ ಹಾಗೂ ನೀರಿನ ಟ್ಯಾಂಕ್ ಹಾಗೂ ಸ್ನಾನ ಗೃಹ ಕ್ಲೀನಿಂಗ್ ಗೆ ಬಳಸುತ್ತಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಮಾತ್ರವೇ ಇಂತಹ ಕೆಲಸಗಳನ್ನು ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
ಓದಿ ಬರೆಯ ಬೇಕಾಗಿರುವ ವಯಸ್ಸಿನ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಕೈಗೆ ಶೌಚಾಲಯ ಕ್ಲೀನಿಂಗ್ ಮಾಡಲು ಬ್ಲೀಚಿಂಗ್ ಪೌಡರ್ ಗಳನ್ನು ನೀಡಲಾಗುತ್ತಿತ್ತು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
ಇನ್ನೂ ದಿ ಹಿಂದೂ ವರದಿಯ ಪ್ರಕಾರ, ಶಾಲೆಯಲ್ಲಿ ಅನ್ಯಾಯವಾಗಿ ದುಡಿಸಿಕೊಂಡಿರುವ ಪರಿಣಾಮ ವಿದ್ಯಾರ್ಥಿಗಳ ಕೈಗಳಲ್ಲಿ ಗುಳ್ಳೆಗಳು ಕಂಡು ಬಂದಿವೆ ಎನ್ನಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಎರಡು ಬ್ಯಾಚ್ ಗಳನ್ನಾಗಿ ಮಾಡಿ ಅವರನ್ನು ಶೌಚಾಲಯ ಕ್ಲೀನಿಂಗ್ ನಂತಹ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ.
ಇತ್ತ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮುಖ್ಯೋಪಾಧ್ಯಾಯಿನಿ ಸ್ಥಳದಿಂದ ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೋಷಕರು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka