ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕಾಫಿ ಕುಡಿಯುವುದರಿಂದಾಗುವ ಪ್ರಯೋಜನಗಳೇನು? - Mahanayaka

ಕಾಫಿ ಪ್ರಿಯರಿಗೆ ಸಿಹಿ ಸುದ್ದಿ: ಕಾಫಿ ಕುಡಿಯುವುದರಿಂದಾಗುವ ಪ್ರಯೋಜನಗಳೇನು?

coffee
25/06/2021

ಕಾಫಿ ಪ್ರಿಯರಿಗೆ  ಸಿಹಿ ಸುದ್ದಿಯೊಂದು ದೊರೆತಿದೆ. ಇತ್ತೀಚಿಗಿನ ಅಧ್ಯಯನದ ಪ್ರಕಾರ ಪ್ರತೀ ದಿನ ಕಾಫಿ ಕುಡಿಯುವುದರಿಂದ ಜನರು ಯಕೃತ್ತಿ(ಲಿವರ್)ನ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಬಹಳ ಕಡಿಮೆ ಎಂದು ಹೇಳಲಾಗಿದೆ.


Provided by

ಸೌತೌಂಪ್ಟನ್ ವಿಶ್ವವಿದ್ಯಾಲಯದ ಡಾ.ಆಲಿವರ್ ಕೆನಡಿ ಅವರ ನೇತೃತ್ವದ ತಂಡ ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ತಿಳಿದು ಬಂದಿದೆ. ಕಾಫಿ ಕುಡಿಯುವ ಹವ್ಯಾಸ ಇರುವವರು ಯಕೃತ್ತಿನ ಕಾಯಿಲೆಗೆ ಒಳಗಾಗುವ ಸಾಧ್ಯತೆ ಕೇವಲ ಶೇ.20ರಷ್ಟು ಮಾತ್ರವಾಗಿದೆ. ಆದರೆ ಕಾಫಿ ಕುಡಿಯದೇ ಇರುವವರಲ್ಲಿ ಯಕೃತ್ತಿನ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಲಾಗಿದೆ.

ಈ ಅಧ್ಯಯನಕ್ಕಾಗಿ 40ರಿಂದ 69 ವರ್ಷದೊಳಗಿನ ಸುಮಾರು 494,585 ಮಂದಿ ಕಾಫಿ ಪ್ರಿಯರನ್ನು ಬಳಸಿಕೊಳ್ಳಲಾಗಿದೆ. ಈ ಸಂಶೋಧನೆಯಲ್ಲಿ ತಿಳಿದು ಬಂದಿರುವ ವಿಚಾರ ಏನೆಂದರೆ, ಕಾಫಿ ಕುಡಿಯುವವರಲ್ಲಿ ಯಕೃತ್ತಿನ ಕಾಯಿಲೆಗಳು ಉಳಿದವರಿಗಿಂತ ಬಹಳ ಕಡಿಮೆಯಾಗಿದೆ ಎಂದು.

ಯಕೃತ್ತಿನಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ನಂತಹ ಅಪಾಯವನ್ನೂ ಕಾಫಿ ಕಡಿಮೆ ಮಾಡುತ್ತದೆ. ಕಾಫಿಯನ್ನು ಬೆಳಗ್ಗೆ ಅಥವಾ ಮಧ್ಯಾಹ್ನದ ಸಮಯಗಳಲ್ಲಿ ಕುಡಿಯುವುದು ಉತ್ತಮ. ರಾತ್ರಿ ಮಲಗುವ ಸಂದರ್ಭದಲ್ಲಿ ಕಾಫಿ ಕುಡಿಯುವುದು ಉತ್ತಮವಲ್ಲ. ಮಲಗುವುದಕ್ಕಿಂತಲೂ 6 ಗಂಟೆಗಳಿಗೆ ಮುಂಚಿತವಾಗಿ ಕಾಫಿ ಕುಡಿಯುವುದು ಉತ್ತಮ. ಯಾಕೆಂದರೆ, ಮಲಗುವ ಸಮಯದಲ್ಲಿ ಕಾಫಿ ಕುಡಿಯುವುದು. ನಿಮ್ಮ ನಿದ್ರೆಗೆ ಅಡ್ಡಿಯಾಗಬಹುದು.

ಇತ್ತೀಚಿನ ಸುದ್ದಿ