ಮಲಬದ್ಧತೆ ಸಮಸ್ಯೆ, ಕೂದಲಿನ ಬೆಳವಣಿಗೆಗೆ ಅಗಸೆ ಬೀಜ ಪ್ರಯೋಜನಕಾರಿ - Mahanayaka
3:41 AM Thursday 19 - September 2024

ಮಲಬದ್ಧತೆ ಸಮಸ್ಯೆ, ಕೂದಲಿನ ಬೆಳವಣಿಗೆಗೆ ಅಗಸೆ ಬೀಜ ಪ್ರಯೋಜನಕಾರಿ

flaxseed
17/03/2022

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಲ್ಲಾ ವಯೋಮಾನದವರಲ್ಲಿ ಒಂದು ರೋಗವಾಗುತ್ತಿದೆ. ಮಲಬದ್ಧತೆಯಿಂದಾಗಿ ಮುಖದ ಮೇಲೆ ಮೊಡವೆ, ಪೈಲ್ಸ್ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಗಸೆ ಬೀಜಗಳು ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ.

ಅಗಸೆ ಬೀಜವು ಮಲಬದ್ಧತೆಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಔಷಧಿಯ ಗುಣಗಳನ್ನು ಹೊಂದಿರುವ ಅಗಸೆ ಬೀಜಗಳು ಅನೇಕ ರೋಗಗಳಿಗೆ ಸಿದ್ಧೌಷಧವಾಗಿದೆ. ಅಗಸೆ ಬೀಜಗಳ ಪ್ರಯೋಜನಗಳು

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಹಾರ: ನಾವು ಸೇವಿಸುವ ಅನಾರೋಗ್ಯಕರ ಆಹಾರದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಲ್ಲಾ ವಯೋಮಾನದವರಲ್ಲಿ ಒಂದು ರೋಗವಾಗುತ್ತಿದೆ. ಮಲಬದ್ಧತೆಯಿಂದಾಗಿ ಮುಖದ ಮೇಲೆ ಮೊಡವೆ, ಪೈಲ್ಸ್ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಗಸೆ ಬೀಜಗಳು ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ.


Provided by

ಹೊಟ್ಟೆಯ ಊತ ಕಡಿಮೆ ಮಾಡಲು ಸಹಕಾರಿ: ಅಗಸೆ ಬೀಜದಲ್ಲಿರುವ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯೂ ಸರಿಯಾಗುತ್ತದೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಆಹಾರದಲ್ಲಿ ಅಗಸೆಬೀಜವನ್ನು ಸೇರಿಸಿಕೊಳ್ಳಬೇಕು. ಅಗಸೆಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ಕರುಳಿನ ಉರಿಯೂತ ಸೇರಿದಂತೆ ಅನೇಕ ಕಾಯಿಲೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅಗಸೆ ಬೀಜಗಳು ನಮ್ಮ ದೇಹದ ಆರೋಗ್ಯ ರಕ್ಷಣೆಯಲ್ಲಿ ಒಂದು ರೀತಿ ಕೆಲಸ ಮಾಡಿದರೆ ನಮ್ಮ ಕೂದಲಿನ ಬೆಳವಣಿಗೆ ಮತ್ತು ಮೃದುತ್ವ ಕಾಪಾಡುವಲ್ಲಿ ಇನ್ನೊಂದು ರೀತಿ ಕೆಲಸ ಮಾಡುತ್ತವೆ. ಅಗಸೆ ಬೀಜಗಳಲ್ಲಿ ನಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವ ಸಾಕಷ್ಟು ಪ್ರಮಾಣದ ಅತ್ಯಧಿಕ ಪೌಷ್ಟಿಕ ಸತ್ವಗಳು ಸುಲಭವಾಗಿ ಲಭ್ಯವಾಗುತ್ತವೆ.

ಅವುಗಳೆಂದರೆ, ಒಮೆಗಾ – 3 ಫ್ಯಾಟಿ ಆಸಿಡ್, ನಾರಿನ ಅಂಶ, ವಿಟಮಿನ್ ‘ ಬಿ ‘ ಅಂಶ, ಕ್ಯಾನ್ಸರ್ ವಿರುದ್ಧ ಹೋರಾಡುವ ಲಿಗ್ನಾನ್ ಅಂಶಗಳು, ಆಂಟಿ – ಆಕ್ಸಿಡೆಂಟ್ ಅಂಶಗಳು.

ಅಗಸೆ ಬೀಜಗಳಲ್ಲಿ ಲಭ್ಯವಿರುವ ಈ ಎಲ್ಲಾ ಪ್ರಕಾರದ ಪೌಷ್ಟಿಕಾಂಶಗಳು ಕೇವಲ ನಮ್ಮ ದೇಹದ ತೂಕವನ್ನು ಅಥವಾ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ನಮ್ಮ ಕೊಲೆಸ್ಟ್ರಾಲ್ ಅಂಶವನ್ನು ಸಹ ನಿಗದಿತ ಪ್ರಮಾಣದಲ್ಲಿ ತಗ್ಗಿಸುತ್ತದೆ.

ಅಗಸೆ ಬೀಜಗಳು ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ.

ಅಲ್ಲದೆ, ಇದರ ಜೊತೆಗೆ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವಿಕೆ, ತಲೆ ಹೊಟ್ಟು ನಿವಾರಣೆ ಇತ್ಯಾದಿಗಳಲ್ಲಿ ಅಗಸೆ ಬೀಜಗಳು ಮಹತ್ವದ ಪಾತ್ರ ಬೀರುತ್ತವೆ.

ವಿಟಮಿನ್ ‘ ಬಿ ‘ ಅಂಶ: ಕೂದಲಿನ ಕಿರು ಚೀಲಗಳಿಗೆ ಜೀವ ತುಂಬಿ ಕೂದಲಿನ ಬೇರುಗಳನ್ನು ಆರೋಗ್ಯಕರವಾಗಿಸಿ, ಕೂದಲಿನ ಸದೃಢತೆಗೆ ಕಾರಣವಾಗುತ್ತದೆ.

ವಿಟಮಿನ್ ‘ ಇ ‘ ಅಂಶ: ನಮ್ಮ ದೇಹದ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ಕೂದಲು ಉದುರುವಿಕೆಯನ್ನು ತಡೆಯುವುದರ ಜೊತೆಗೆ ಕೂದಲಿನ ಆರೋಗ್ಯಕ್ಕೆ ಯಾವುದೇ ಬಗೆಯ ಸೋಂಕುಗಳು ತಾಗದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ‘ ಇ ‘ ಅಂಶ ನಮ್ಮ ತಲೆಯ ನೆತ್ತಿಯ ಭಾಗದಲ್ಲಿ ರಕ್ತ ಸಂಚಾರವನ್ನು ಅಧಿಕಗೊಳಿಸಿ ಕೂದಲಿನ ಸಂಪಾದ ಬೆಳವಣಿಗೆಯಲ್ಲಿ ಸಹಾಯ ಮಾಡಿ ತುಂಬಾ ಉದ್ದವಾದ, ಸದೃಡವಾದ, ಮೃದುವಾದ ಮತ್ತು ಹೊಳಪಾದ ಕೂದಲನ್ನು ನಮ್ಮದಾಗಿಸುತ್ತದೆ.ಒಮೆಗಾ – 3 ಫ್ಯಾಟಿ ಆಸಿಡ್ ಅಂಶ: ಇದು ನಮ್ಮ ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ, ಕೂದಲಿನ ಬೇರುಗಳನ್ನು ಭದ್ರ ಪಡಿಸಿ ಸೊಂಪಾದ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಅಗಸೆ ಬೀಜದ ಎಣ್ಣೆ: ಮಾರುಕಟ್ಟೆಯಲ್ಲಿ ಸುಲಭವಾಗಿ ನಮಗೆ ಅಗಸೆ ಬೀಜದ ಎಣ್ಣೆ ಲಭ್ಯವಾಗುತ್ತದೆ. ಇದನ್ನು ಮನೆಗೆ ತಂದು ನಮ್ಮ ತಲೆ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಬಹುದು. ನೀವು ಇದುವರೆಗೂ ತಲೆಗೆ ಕೊಬ್ಬರಿ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡುತ್ತಿದ್ದ ರೀತಿಯಲ್ಲಿ ಅಗಸೆ ಬೀಜದ ಎಣ್ಣೆಯನ್ನು ಸಹ ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನಿಮ್ಮ ಕೂದಲನ್ನು ಆಯುರ್ವೇದ ಶಾಂಪೂ ಬಳಸಿ ತೊಳೆದುಕೊಳ್ಳಬಹುದು.

ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿನ ಕಂಡೀಷನರ್ ಆಗಿ ಕೂಡ ಉಪಯೋಗಿಸಬಹುದು. ಕೂದಲು ಒಂದು ವೇಳೆ ತುಂಬಾ ಒರಟಾಗಿದ್ದರೆ, ಶಾಂಪೂ ಬಳಸಿ ತಲೆ ಸ್ನಾನ ಮಾಡಿದ ನಂತರ ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಬೇಕು ಈ ಮೂಲಕ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು.

ಇತ್ತೀಚಿನ ಸುದ್ದಿ