ಪೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ?
ನಮ್ಮ ಆರೋಗ್ಯ ಯಾವುದೋ ಪ್ರೈವೇಟ್ ಆಸ್ಪತ್ರೆಗಳಲ್ಲಿದೆ ಎನ್ನುವ ಮೂಢನಂಬಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಬಂದ ಬಳಿಕವಂತೂ, ರೋಗಗಳ ವಿರುದ್ಧ ಸ್ಟಿರಾಯ್ಡ್ ಗಳನ್ನು ಬಳಸುತ್ತಿರುವ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನುವ ಆತಂಕಗಳ ನಡುವೆಯೇ, ಜನರಲ್ಲಿ ಆರೋಗ್ಯದ ಬಗೆಗೆ ಕಾಳಜಿ ಹೆಚ್ಚಾಗಿರುವುದೇನು ಸುಳ್ಳಲ್ಲ.
ರೋಗ ಬಂದ ಮೇಲೆ ಚಿಂತೆ ಮಾಡುವುದಕ್ಕಿಂತ, ರೋಗ ಬಾರದ ಹಾಗೆ ತಡೆಯುವುದು ನಿಜವಾದ ಬುದ್ಧಿವಂತಿಕೆ ಎನ್ನುವ ಮಾತುಗಳನ್ನು ವೈದ್ಯರೇ ಹೇಳುತ್ತಾರೆ. ನಮ್ಮ ಆರೋಗ್ಯವು ನಮ್ಮ ಸುತ್ತಮುತ್ತ ದೊರಕುವ ಹಣ್ಣು ಹಂಪಲುಗಳಲ್ಲಿಯೇ ಇರುತ್ತವೆ. ಆದರೆ, ಯಾವ ಹಣ್ಣಿನಿಂದ ಏನೇನು ಪ್ರಯೋಜನಗಳಿವೆ ಎನ್ನುವುದನ್ನು ನಾವು ಮೊದಲು ಅರಿಯಬೇಕಿದೆ. ಇಂದು ಪೇರಳೆ ಹಣ್ಣಿನಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಗ್ರಾಮಾಂತರ ಪ್ರದೇಶಗಳಲ್ಲಿ ಹೇರಳವಾಗಿ ದೊರೆಯುವ ಪೇರಳೆ ಹಣ್ಣಿನಲ್ಲಿ ಪೌಷ್ಠಿಕಾಂಶದ ಒಂದು ಉಗ್ರಾಣ ಎಂದರೆ ತಪ್ಪಾಗಲಾರದು. ಇದರ ಹಣ್ಣುಗಳು ಮಾತ್ರವಲ್ಲದೇ, ಎಲೆಯಲ್ಲಿಯೂ ಔಷಧೀಯ ಗುಣಗಳಿವೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ.
ಸಂಶೋಧನೆಯ ಪ್ರಕಾರ, ಪೇರಳೆ ಹಣ್ಣನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಇದರ ಜೊತೆಗೆ ನಮ್ಮ ಜೀರ್ಣಾಂಗದಲ್ಲಿರುವ ಸಮಸ್ಯೆಯನ್ನೂ ಪೇರಳೆ ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಹಣ್ಣನ್ನು ಹೆಚ್ಚಾಗಿ ಸೇವಿಸಬಹುದಾಗಿದೆ ಯಾಕೆಂದರೆ, ಪೇರಳೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.
ಇನ್ನಷ್ಟು ಸುದ್ದಿಗಳು…
ಡೊಳ್ಳು ಹೊಟ್ಟೆಯನ್ನು ವ್ಯಾಯಾಮವೇ ಮಾಡದೇ ಕರಗಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ
ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ?
ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!
ಮೊಡವೆಗಳಿಂದ ಬೇಸತ್ತು ಹೋಗಿದ್ದೀರಾ? | ರಾಸಾಯನಿಕ ಕ್ರೀಮ್ ಹಚ್ಚೋದು ಬಿಡಿ, ಮಾವಿನ ಹಣ್ಣು ಬಳಸಿ