ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ - Mahanayaka

ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ

kharjur
08/09/2021

ತೀವ್ರ ಹಸಿವಿನ ಸಂದರ್ಭದಲ್ಲಿ ಒಂದು ಖರ್ಜೂರ ಸೇವಿಸಿದರೆ, ಸಾಕು. ಮನುಷ್ಯನ ದೇಹದ ಅರ್ಧ ಆಯಾಸವನ್ನು ಹೋಗಲಾಡಿಸುವಷ್ಟು ಶಕ್ತಿ ಅದರಲ್ಲಿದೆ. ಸುಮಾರು 500ರಕ್ಕೂ ಹೆಚ್ಚು ವಿಧದ ವಿವಿಧ ಖರ್ಜೂರಗಳಿವೆ. ಈ ಖರ್ಜೂರಗಳಲ್ಲಿ  ಮನುಷ್ಯನ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣದ ಅಂಶ ಸೇರಿದಂತೆ ವಿವಿಧ ಅಂಶಗಳಿವೆ.


Provided by

ಮಾಗಿದ ಖರ್ಜೂರವನ್ನು ನೀರಿನಲ್ಲಿ ಕುದಿಸಿದ ಬಳಿಕ ಅದನ್ನು ಒಣಗಿಸಿ, ದೀರ್ಘಕಾಲದ ವರೆಗೂ ಸಂರಕ್ಷಿಸಲಾಗುತ್ತದೆ. ಈ ಖರ್ಜೂರ್ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಕೂಡ ಉತ್ತಮವಾದ ಬೇಡಿಕೆ ಇದೆ. ಮುಖ್ಯವಾಗಿ ಖರ್ಜೂರ ನಮ್ಮ ದೇಹದಲ್ಲಿ ಚೈತನ್ಯವನ್ನು ತುಂಬುತ್ತದೆ.

ನಮಗೆ ತೀವ್ರವಾದ ಹಸಿವಾಗುವ ಸಂದರ್ಭದಲ್ಲಿ ಒಂದೆರಡು ಖರ್ಜೂರದ ಹಣ್ಣು ತಿಂದು ನೀರು ಕುಡಿದರೆ ಸಾಕು, ಕೆಲವೇ ಕ್ಷಣಗಳಲ್ಲಿ ನಮ್ಮ ದೇಹ ಹಸಿವು ಮತ್ತು ಆಯಾಸದಿಂದ ಮುಕ್ತವಾಗುತ್ತದೆ.  ಒಂದು ಲೋಟ ಹಾಲು ಮತ್ತು ಒಂದು ಖರ್ಜೂರದ ಹಣ್ಣು ಒಂದು ಹೊತ್ತಿನ ಹಸಿವನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ.

ಇದರಲ್ಲಿ ಕಾರ್ಬೋಹೈಡ್ರೇಡ್ ಗಳು, ಪ್ರೋಟೀನ್, ಕ್ಯಾಲ್ಸಿಯಂ, ಅಮೈನೋ ಆಮ್ಲಗಳು, ಸಲ್ಫರ್, ಕಬ್ಬಿಣ, ಪೊಟ್ಯಾಷಿಯಂ, ರಂಜಕ, ಮ್ಯಾಂಗನಿಸ್, ಮೆಗ್ನಿಷಿಯಂ, ಫೈಬರ್, ವಿಟಮಿನ್ ಎ1, ಬಿ1, ಬಿ2, ಬಿ3, ಬಿ5 ಮತ್ತು ಬಿ9 ಸೇರಿದಂತೆ ಹಲವಾರು ಪೋಷಕಾಂಶಗಳಿವೆ.


Provided by

ಖರ್ಜೂರದಿಂದ ಆರೋಗ್ಯ ಲಾಭಗಳು:

ಹೊಟ್ಟೆಯ ಹಲವು ಸಮಸ್ಯೆಗಳ ನಿವಾರಣೆಗೆ ಖರ್ಜೂರ ಅತ್ಯುತ್ತಮವಾಗಿದೆ. ಹೃದ್ರೋಗ ಸಮಸ್ಯೆಗಳ ನಿಯಂತ್ರಣಕ್ಕೂ ಖರ್ಜೂರ ಉತ್ತಮವಾಗಿದೆ. ಜೊತೆಗೆ ಹೊಟ್ಟೆಯ ಕ್ಯಾನ್ಸರ್ ಗೆ ಇದು ಉತ್ತಮ ಔಷಧಿಯಾಗಿದೆ. ಸ್ನಾಯುಗಳ ಬೆಳವಣಿಗೆಗೂ ಇದು ಸಹಕಾರಿಯಾಗಿದೆ.

ಇನ್ನೂ ಬಹುತೇಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ಲೈಂಗಿಕ ಆಯಾಸಗಳ ಪರಿಹಾರಕ್ಕೂ ಖರ್ಜೂರ ಅತ್ಯುತ್ತಮ ಪರಿಹಾರವಾಗಿದೆ. ಖರ್ಜೂರ ಸೇವನೆಯಿಂದ ನಮ್ಮ ದೇಹವು ಆಯಾಸ ಮುಕ್ತವಾಗುತ್ತದೆ. ಹೀಗಾಗಿ ಲೈಂಗಿಕ ಜೀವನದ ಸಮಸ್ಯೆಗಳಿಗೂ ಪರಿಹಾರವಿದೆ.

 

ಇತ್ತೀಚಿನ ಸುದ್ದಿ