ಈರುಳ್ಳಿ ಸೇವನೆಯಿಂದಾಗುವ ಪ್ರಯೋಜನಗಳೇನು? - Mahanayaka
1:30 AM Tuesday 12 - November 2024

ಈರುಳ್ಳಿ ಸೇವನೆಯಿಂದಾಗುವ ಪ್ರಯೋಜನಗಳೇನು?

onion
07/03/2022

ಈರುಳ್ಳಿ ಎಂದರೆ, ಬೆಲೆ ಏರಿಕೆಯಾದಾಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುವುದು, ಬೆಲೆ ಕಡಿಮೆಯಾದಾಗ ರೈತರ ಕಣ್ಣಲ್ಲಿ ನೀರು ತರಿಸುವ ತರಕಾರಿ ಎಂದಷ್ಟೇ ಹೆಚ್ಚಾಗಿ ಜನರು ಗಮನಿಸುತ್ತಾರೆ. ಆದರೆ, ಈರುಳ್ಳಿಯಲ್ಲಿರುವ ಉತ್ತಮ ಗುಣಗಳನ್ನು ನಾವ್ಯಾರು ತಿಳಿದಿಲ್ಲ.

ಈರುಳ್ಳಿ ಉತ್ತೇಜಕ ಎಂದು ಕೆಲವರು ಈರುಳ್ಳಿಯನ್ನು ಬಳಸುವುದಿಲ್ಲ. ಆದರೆ, ಈ ಲೇಖನ ಈರುಳ್ಳಿ ಪ್ರಿಯರಿಗೆ ಮಾತ್ರವೇ ಆಗಿದೆ. ನೀವು ಈರುಳ್ಳಿಯನ್ನು ದಿನಾ ಒಂದಲ್ಲ ಒಂದು ರೂಪದಲ್ಲಿ ಸೇವಿಸುತ್ತಿದ್ದೀರಿ ಎಂದಾದರೆ, ತಪ್ಪದೇ ಅದೇ ರೀತಿಯಾಗಿ ಸೇವಿಸುತ್ತಿರಿ. ಯಾರದ್ದೋ ಮಾತಿಗೆ ಕಟ್ಟು ಬಿದ್ದು ಈರುಳ್ಳಿ ಸೇವನೆ ನಿಲ್ಲಿಸಬೇಡಿ. ಯಾಕೆಂದರೆ ಈರುಳ್ಳಿ ಸರ್ವ ಶ್ರೇಷ್ಠ.

ಈರುಳ್ಳಿ ಕಡಿಮೆ ಕ್ಯಾಲೋರಿಯ ತರಕಾರಿ. ಇದರಲ್ಲಿ ಪೋಟ್ಯಾಶಿಯಮ್, ಕ್ಯಾಲ್ಸಿಯಮ್ ಮತ್ತು ಕಬ್ಬಿಣದ ಅಂಶವಿದೆ. ಈರುಳ್ಳಿ ಮಾನವನ ದೇಹದ ತೂಕವನ್ನು ನಿಯಂತ್ರಿಸುತ್ತದೆ.  ಜೊತೆಗೆ ಚರ್ಮದ ಮೇಲೆ ಕಲೆಗಳಿದ್ದರೂ ಈರುಳ್ಳಿಯ ಅದನ್ನು ತೆಗೆದು ಹಾಕುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಈರುಳ್ಳಿಯು ಮುಖ್ಯವಾಗಿ ದೇಹದ ತೂಕ ಮತ್ತು ಚರ್ಮದ ಸಮಸ್ಯೆಗಳ ವಿರುದ್ಧ ಹೋರಾಡುವ ತರಕಾರಿಯಾಗಿದೆ. ಚರ್ಮದ ರೋಗಗಳಿಗೆ ಈರುಳ್ಳಿ ನೀಡುವಷ್ಟು ಫಲಿತಾಂಶ ಬೇರಾವುದೇ ತರಕಾರಿ ನೀಡಲು ಸಾಧ್ಯವಿಲ್ಲ ಎಂದು ಕೇರಳದ ತಜ್ಞರು ಹೇಳುತ್ತಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ