ವಿಷಜಂತುಗಳು ಕಚ್ಚಿದಾಗ ಏನು ಮಾಡಬೇಕು?
ಮನುಷ್ಯ ಎಂದರೆ ಸಾಕು. ಅವನಿಗೆ ಯಾವಾಗ ಎಲ್ಲಿಂದ ಆಪತ್ತು ಬರಬಹುದು ಎಂದು ಹೇಳಲಾಗುವುದಿಲ್ಲ. ಕೆಲವು ಬಾರಿ ಸುಮ್ಮನೆ ನಿಂತಿದ್ದರೂ ಏನಾದರೂ ಅಂದುಕೊಳ್ಳದಿರುವ ಆಕಸ್ಮಿಕ ಘಟನೆಗಳು ನಡೆದೇ ಹೋಗುತ್ತವೆ. ಇಂಹದ್ದರ ಪೈಕಿ, ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿ ವಿಷ ಜಂತುಗಳು ಕಡಿದು ಅಪಾಯಕ್ಕೀಡಾಗುವ ಆಕಸ್ಮಿಕ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ.
ಚೇಳು, ಜೇಡ ಇಂತಹ ವಿಷಕಾರಿ ಅಂಶಗಳಿರುವ ಸಣ್ಣ ಜೀವಿಗಳು ನಮ್ಮ ದೇಹಕ್ಕೆ ಕುಟುಕಿದಾಗ ಅದರಲ್ಲಿರುವ ವಿಷವು ನಮ್ಮ ದೇಹಕ್ಕೆ ಪ್ರವೇಶಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಇದು ಪ್ರಾಣಕ್ಕೂ ಅಪಾಯವನ್ನು ತರಬಹುದು. ಆ ಸಂದರ್ಭದಲ್ಲಿ ನಾವು ಏನು ಮಾಡಬೇಕು. ರಾತ್ರಿ ಸಂದರ್ಭದಲ್ಲಿ ನಮಗೆ ಸರಿಯಾಗಿ ಆಸ್ಪತ್ರೆಗಳಿಗೂ ಹೋಗಲಾಗದ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದು ನಾವು ತಿಳಿದಿರಬೇಕಿದೆ.
ವಿಷಕಾರಿ ಜೀವಿಗಳು ನಮ್ಮನ್ನು ಕಚ್ಚಿದಾಗ, ಅರಿಶಿನ ಮತ್ತು ತುಳಸಿಯನ್ನು ಜಜ್ಜಿ ಕಚ್ಚಿದ ಭಾಗಕ್ಕೆ ಇಟ್ಟು ಕಟ್ಟಬೇಕು. ಅರಿಶಿನವು ನಂಜು ಅಂಶಗಳನ್ನು ಎಳೆದು ಹೊರ ಹಾಕುವ ಗುಣವನ್ನು ಹೊಂದಿರುತ್ತದೆ. ಹೀಗಾಗಿ ಗಾಯದ ನೋವಿನಿಂದಲೂ ಇದು ಮುಕ್ತಿ ನೀಡುತ್ತದೆ. ತುಳಸಿ ಕೂಡ ಉತ್ತಮ ಪ್ರತಿರೋಧ ಹೊಂದಿದ ಸಸ್ಯವಾಗಿದೆ. ಅದು ವಿಷಕಾರಿ ಅಂಶಗಳೊಂದಿಗೆ ದೇಹ ಹೋರಾಡಲು ಸಹಾಯ ಮಾಡುತ್ತದೆ.