ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!
ಮನುಷ್ಯ ತನ್ನ ಆಹಾರದ ಮೂಲಕವೇ ತನ್ನ ರೋಗಗಳನ್ನು ನಿಯಂತ್ರಿಸಲು ಸಾಧ್ಯ. ಪ್ರತಿಯೊಂದು ಕಾಯಿಲೆಗೂ ಕೇವಲ ಮದ್ದು, ಮಾತ್ರೆಗಳನ್ನು ಸೇವಿಸುವುದೇ ಪರಿಹಾರವಲ್ಲ. ಹಾಗೆಂದರೆ ಮದ್ದು ಮಾತ್ರೆಗಳನ್ನು ಸೇವಿಸ ಬಾರದು ಎಂದರ್ಥವಲ್ಲ. ನಮ್ಮ ಆಹಾರವನ್ನು ನಿಯಂತ್ರಿಸುವ ಮೂಲಕ ರೋಗಬಾರದ ಹಾಗೆ ಮತ್ತು ಬಂದಿರುವ ರೋಗವನ್ನು ನಿಯಂತ್ರಿಸುವ ಬಗ್ಗೆ ಜನರು ಯೋಚಿಸಬೇಕಿದೆ ಎಂದು ಸಾಮಾನ್ಯವಾಗಿ ಆಹಾರ ತಜ್ಞರು ಹೇಳುತ್ತಾರೆ.
ಇಂದು ನಾವು ದಾಳಿಂಬೆ ಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ಏನೇನು ಉಪಯೋಗಗಳಿವೆ ಎನ್ನುವುದನ್ನು ತಿಳಿಯೋಣ: ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಕೆ, ಬಿಯಂತಹ ಅನೇಕ ಪೋಷಕಾಂಶಗಳಿವೆ. ಈ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮಧುಮೇಹಿಗಳು ಪ್ರತಿದಿನ ಒಂದು ಲೋಟ ದಾಳಿಂಬೆ ರಸ ಕುಡಿಯುವುದು ಉತ್ತಮ. ಜೊತೆಗೆ ಮೂತ್ರಕೋಶದಲ್ಲಿನ ಕಲ್ಲುಗಳನ್ನು ಕರಗಿಸಲು ಕೂಡ ಸಹಾಯಕವಾಗಿದೆ.
ದಾಳಿಂಬೆ ಹಣ್ಣು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿರುವ ನೈಟ್ರಿಕ್ ಆಮ್ಲವು ಅಪಧಮನಿಗಳಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಶೇ.90ರಷ್ಟು ಕೊಬ್ಬು ಮತ್ತು ಕೊಲೆಸ್ಟ್ರಾಲ್ ನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ದಾಳಿಂಬೆ ಹೊಂದಿದೆ. ರಕ್ತದ ಒತ್ತಡವನ್ನು ಕಡಿಮೆ ಮಾಡಿ, ನಿಯಂತ್ರಿಸಲು ಪ್ರತಿದಿನ ದಾಳಿಂಬೆ ಹಣ್ಣನ್ನು ತಿನ್ನುವುದು ಉತ್ತಮ.
ಇನ್ನೂ ಜೀರ್ಣಕ್ರಿಯೆಯಲ್ಲಿ ಆಗುವ ಸಮಸ್ಯೆಗಳ ನಿವಾರಣೆಗೂ ದಾಳಿಂಬೆ ಅತ್ಯುತ್ತಮ. ಮಕ್ಕಳಲ್ಲಿ ಕಂಡು ಬರುವ ಅತಿಸಾರ ಸಮಸ್ಯೆಗಳ ನಿವಾರಣೆಗೆ ಕೂಡ ಇದು ಸಹಕಾರಿಯಾಗಿದೆ. ಕ್ರೋನ್ಸ್ ಕಾಯಿಲೆ, ಹುಣ್ಣು ಮತ್ತು ಉರಿಯೂತದ ಕರುಳಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಾಳಿಂಬೆ ಹಣ್ಣು ಉತ್ತಮ ಔಷಧಿಯಾಗಿದೆ.
ಇನ್ನಷ್ಟು ಸುದ್ದಿಗಳು…
ಮಲಯಾಳಂ ಖ್ಯಾತನಟ ಮಮ್ಮುಟ್ಟಿ ಸಹಿತ 300 ಮಂದಿಯ ವಿರುದ್ಧ ಪ್ರಕರಣ ದಾಖಲು!
ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್
ಪಿಕ್ನಿಕ್ ಗೆ ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕುಟುಂಬಸ್ಥರ ಕಣ್ಣ ಮುಂದೆಯೇ ನೀರುಪಾಲಾದರು!
ಡಾಮಿನೊಸ್ ಪಿಜ್ಜಾ ಮಳಿಗೆಯಲ್ಲಿ ಯುವತಿಗೆ ಹಲ್ಲೆ ನಡೆಸಿದ ಮ್ಯಾನೇಜರ್ ಅರೆಸ್ಟ್
3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ