ಹೃದಯಾಘಾತಕ್ಕೂ ಮೊದಲು ಕಂಡು ಬರುವ ಮುನ್ಸೂಚನೆ ಏನು? | ಹೃದಯಾಘಾತಕ್ಕೂ ಮೊದಲು ಏನಾಗುತ್ತೆ? - Mahanayaka
10:10 AM Tuesday 4 - February 2025

ಹೃದಯಾಘಾತಕ್ಕೂ ಮೊದಲು ಕಂಡು ಬರುವ ಮುನ್ಸೂಚನೆ ಏನು? | ಹೃದಯಾಘಾತಕ್ಕೂ ಮೊದಲು ಏನಾಗುತ್ತೆ?

heart attack
29/10/2021

ಹೃದಯಾಘಾತ ಎನ್ನುವುದು ಪ್ರಸ್ತುತ ಯುವ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ನಮ್ಮಲ್ಲಿ ಸಾಮಾನ್ಯ ರೀತಿಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಏಕಾಏಕಿ ಪ್ರಾಣವನ್ನೇ ತೆಗೆದು ಭಾರೀ ನಷ್ಟವನ್ನುಂಟು ಮಾಡುವ ಹೃದಯಾಘಾತದ ಬಗ್ಗೆ ನಾವು ತಿಳಿದುಕೊಳ್ಳಬೇಕಿರುವುದು ಅವಶ್ಯಕವಾಗಿದೆ.

 

ಹೃದಯಾಘಾತವಾಗುವುದಕ್ಕೂ ಮೊದಲು ಎದೆ ಸ್ವಲ್ಪ ನೋವಾಗುತ್ತದೆ. ಇದು ಮೊದಲ ಲಕ್ಷಣವಾಗಿದೆ. ಆ ಬಳಿಕ ಎದೆ ಭಾರವಾದಂತೆ ಭಾಸವಾಗುತ್ತದೆ. ಎದೆಯಲ್ಲಿ ಏನೋ ಸಂಕಟ ಎಂಬಂತೆ ಅನ್ನಿಸುತ್ತದೆ. ಇದು ಕೆಲವು ನಿಮಿಷಗಳವರೆಗೆ ಇರುತ್ತದೆ. ಆ ಬಳಿಕ ಬೆನ್ನು, ಕುತ್ತಿಗೆ, ದವಡೆ ಹೊಟ್ಟೆಯಲ್ಲಿ ಕೂಡ ನೋವು ಆರಂಭವಾಗಿ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.

 

ಮೇಲೆ ಹೇಳಲಾದ ಎಲ್ಲ ಲಕ್ಷಣಗಳ ಬಳಿ ಏಕಾಏಕಿ ಹೃದಯಾಘಾತವಾಗುತ್ತದೆ. ಈ ವೇಳೆ ಎದೆಯಲ್ಲಿ ಭಾರೀ ನೋವು, ಬೆವರು, ಹೆದರಿಕೆಯಾಗುತ್ತದೆ. ಇನ್ನು ಕೆಲವರು ಈ ಸಂದರ್ಭದಲ್ಲಿ ವಾಂತಿ ಮಾಡಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.

 

ಈ ಎಲ್ಲ ಲಕ್ಷಣಗಳ ಬಳಿಕ 10ರಿಂದ 15 ನಿಮಿಷದಲ್ಲಿ ಇದು ಸುಧಾರಿಸದೇ ಹೋದರೆ, ಅದು ದೊಡ್ಡ ಹೃದಯಾಘಾತದ ಲಕ್ಷಣ ಇದಾಗಿದೆ. ಈ ವೇಳೆ ಕೂಡಲೇ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲೇ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಿದರೆ, ಪ್ರಾಣಕ್ಕೆ ಅಪಾಯ ಖಂಡಿತ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ