ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ
ತಿರುವನಂತಪುರಂ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಲಪ್ರಳಾಯದ ಭೀತಿ ಸೃಷ್ಟಿಸಿದೆ. ಕೇರಳದ ವಿವಿಧೆಡೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ತಿರುವನಂತಪುರಂ, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಲಾಗಿದ್ದು, ಇನ್ನಿತರರ ಜಿಲ್ಲೆಗಳಲ್ಲಿ ರೆಡ್ ಅಲಾರ್ಟ್ ಘೋಷಿಸಲಾಗಿದೆ.
ನಿನ್ನೆ ರಾತ್ರಿಯಿಂದಲೇ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈಗಾಗಲೇ ಇಲ್ಲಿನ ಅಣೆಕಟ್ಟುಗಳು ಕೂಡ ಭರ್ತಿಯಾಗಿವೆ. ತೀವ್ರ ಮಳೆಯ ಪರಿಣಾಮ ಈವರೆಗೆ ಕೇರಳದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇರಳದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸಮಯ ಕಳೆದಂತೆಯೇ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಮುಖ್ಯವಾಗಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸಮಸ್ಯೆಯಾಗಿದೆ. ಅವರಿಗೆ ತಕ್ಷಣವೇ ಎತ್ತರದ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ಇಲ್ಲಿನ ಚೋಳತಡಂ ಕೂಟಿಕಲ್ ಗ್ರಾಮದ ಪ್ಲಾಪಲ್ಲಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ ಮೂರು ಮನೆಗಳು ಕೊಚ್ಚಿ ಹೋಗಿವೆ. ಇಲ್ಲಿ ವಾಸುತ್ತಿದ್ದ ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರದೇಶಕ್ಕೆ ರಕ್ಷಣಾ ತಂಡಗಳು ಇನ್ನೂ ತಲುಪಲು ಸಾಧ್ಯವಾಗದ ಕಾರಣ, ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆ | ನಾಯಕತ್ವದ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ
ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಶಾಲೆಯಲ್ಲಿಯೇ ಅತ್ಯಾಚಾರ!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ | ಏಮ್ಸ್ ಅಧಿಕಾರಿ ಮಾಹಿತಿ
ಉಗ್ರಪ್ಪಗೆ ರಕ್ಷಣೆ ಸಲೀಂ ಅವರ ಉಚ್ಛಾಟನೆ: “ಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು” | ಕುಮಾರಸ್ವಾಮಿ ಕಿಡಿ
ತ್ರಿಶೂಲ ದೀಕ್ಷೆ ನೀಡಿದ್ದೇವೆಯೇ ಹೊರತು ಬಾಂಬ್, ಗ್ರೆನೈಡ್ ಕೊಟ್ಟಿದ್ದಲ್ಲ | ಶರಣ್ ಪಂಪ್ ವೆಲ್
ನೈತಿಕ ಪೋಲಿಸ್ ಗಿರಿ: ಸಿಎಂ ಹೇಳಿಕೆ ದುಷ್ಕ್ರತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ | ಸಿಪಿಐಎಂ ಆಕ್ರೋಶ